ಬೆಂಗಳೂರು (ಅ. 10) : ಸಂಕಷ್ಟದ ನಡುವೆ ಈ ಬಾರಿಯ SSLC ಪರೀಕ್ಷೆಗಳು ನಡೆದಿದ್ದು, ವಿದ್ಯಾರ್ಥಿಗಳು ಫಲಿತಾಮಶಕ್ಕಾಗಿ ಕಾದು ಕುಳಿತಿದ್ದಾರೆ. ಅವರ ನೀರಿಕ್ಷೆಯಂತೆ ಇಂದು ( ಅಗಸ್ಟ್ 10 ) 3 ಗಂಟೆಗೆ ಫಲಿತಾಂಶ ಹೊರಬೀಳಲಿದೆ ಎಂದು ಸಚಿವ ಸುರೇಶ ಕುಮಾರ್ ಅವರು ತಿಳಿಸಿದ್ದಾರೆ.
ಈ ಬಾರಿ 8,48,203 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ಇಂದು 3 ಗಂಟೆಗೆ ಇಲಾಖೆಯ karresults.nic.in ಅಥವಾ kseeb.kar.nic.in ಸೈಟ್ ನಲ್ಲಿ ಲಭ್ಯವಾಗಲಿದೆ. ಇದರೊಂದಿಗೆ ಇಲಾಖೆಯು ಉತ್ತೀರ್ಣಗೊಂಡ ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ಅಂಕಗಳ ವಿವರದ ಎಸ್ ಎಮ್ ಎಸ್ ರವಾನೆ ಮಾಡಲಿದೆ. ಫಲಿತಾಂಶ ಪಡೆಯಲು ಯಾವುದೇ ಸಂಖ್ಯೆಗೆ ಎಸ್ ಎಮ್ ಎಸ್ ಕಳುಹಿಸುವ ಅಗತ್ಯವಿಲ್ಲ. ಉಚಿತವಾಗಿ ಇಲಾಖೆಯೇ ಕಳುಹಿಸಲಿದೆ.
SSLC ಪರೀಕ್ಷೆಗಳ ಫಲಿತಾಂಶವನ್ನು ಸೋಮವಾರ 10-8-2020 ರಂದು ಮಧ್ಯಾಹ್ನ 3.00 ಗಂಟೆಗೆ ಪ್ರಕಟಿಸಲಾಗುವುದು.@BSYBJP @blsanthosh @arunbpbjp
— S.Suresh Kumar, Minister – Govt of Karnataka (@nimmasuresh) August 7, 2020