ಬೆಂಗಳೂರು: ಎಸ್ಎಸ್ಎಲ್ಸಿ (SSLC Exams 2021) ಪರೀಕ್ಷೆ ರದ್ದು ಮಾಡುವಂತೆ ಕೋರಿ ಸಿಂಗ್ರೇಗೌಡ ಎಂಬುವವರು ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದಾರೆ.
ಇದನ್ನೂ ಓದಿರಿ: 2nd PU Repeaters Exam 2021: ದ್ವಿತೀಯ ಪಿಯುಸಿ ರಿಪೀಟರ್ಸ್ ಪರೀಕ್ಷೆ ಇಲ್ಲದೇ ಪಾಸ್; ಹೈಕೋರ್ಟ್ಗೆ ತಿಳಿಸಿದ ಸರ್ಕಾರ
ಕರೋನ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸರಕಾರ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಆದರೆ ಎಸ್ಎಸ್ಎಲ್ಸಿ (SSLC Exams 2021) ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲು ಸರಕಾರ ದಿನಾಂಕ ನಿಗದಿ ಮಾಡಿದೆ. SSLC ಮಕ್ಕಳು ಪಿಯು ಮಕ್ಕಳಿಗಿಂತ ಚಿಕ್ಕವರಾಗಿದ್ದು, ಅವರದ್ದು ಕೂಡಾ ಆರೋಗ್ಯವೇ ಅಲ್ಲವೇ ? ಹಾಗಾಗಿ ದ್ವಿತೀಯ ಪಿಯುಸಿ ಪರೀಕ್ಷೆಯಂತೆ 10 ನೇಯ ತರಗತಿಯ ಪರೀಕ್ಷೆಗಳನ್ನೂ ರದ್ದು ಮಾಡಬೇಕೆಂದು ಪಿಐಎಲ್ ನಲ್ಲಿ ಸಿಂಗ್ರೇಗೌಡ ಎಂಬುವವರು ಕೇಳಿಕೊಂಡಿದ್ದಾರೆ.
ಸರಕಾರ ಈ ಮುನ್ನವೇ ಎಸ್ಎಸ್ಎಲ್ಸಿ (SSLC Exams 2021) ಪರೀಕ್ಷೆಯನ್ನು ನಡೆಸಲು ತೀರ್ಮಾನ ತೆಗೆದುಕೊಂಡಿದ್ದು, ದಿನಾಂಕವನ್ನೂ ಘೋಷಣೆ ಮಾಡಿದೆ. ಇದೀಗ ಸಲ್ಲಿಕೆಯಾಗಿರುವ ಪಿಐಎಲ್ ನಿಂದಾಗಿ ಪರೀಕ್ಷೆಗಳು ಏನಾಗಲಿವೆ ಎನ್ನುವ ಆತಂಕ ಸೃಷ್ಟಿಯಾಗಿದೆ.
ಇದನ್ನೂ ಓದಿರಿ: Thawar Chand Gehlot: ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್‌ಚಂದ್ ಗೆಹ್ಲೋಟ್ ನೇಮಕ