ಕಾಯಕ ಯೋಗಿ, ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಅಂತಿಮ ವಿಧಿ ವಿಧಾನ ಸಕಲ ಸರಕಾರಿ ಗೌರವಗಳೊಂದಿಗೆ ಮತ್ತು ಲಿಂಗಾಯತ ಸಂಪ್ರದಾಯದಂತೆ ಸಿದ್ಧಗಂಗೆ ಮಠದಲ್ಲಿ ಇಂದು ಸಂಜೆ ನೆರವೇರಿತು.
ಶ್ರೀಗಳ ಲಿಂಗ ಶರೀರವನ್ನು ಸಮಾಧಿಯಲ್ಲಿ ಇರಿಸಿ ಸಕಲ ವಿಧಿ ವಿಧಾನಗಳೊಂದಿಗೆ ಬಿಲ್ವಪತ್ರೆ, ವಿಭೂತಿ, ಉಪ್ಪು, ಮೆಣಸು ಮುಂತಾದವುಗಳನ್ನು ಬಳಸಿ ಶ್ರೀಗಳ ಕ್ರೀಯಾ ವಿಧಿಯನ್ನು ನೆರವೇರಿಸಲಾಯಿತು.
ಕ್ರೀಯಾ ವಿಧಿಯ ಪ್ರಾರಂಬಕ್ಕೂ ಮೊದಲು ಮುಖ್ಯಮಂತ್ರಿ ಶ್ರೀ ಹೆಚ್ ಡಿ ಕುಮಾರಸ್ವಾಮಿಯವರು ಪುಷ್ಪಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು. ನಂತರದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಇದನ್ನೂ ಓದಿರಿ : ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳ ಪ್ರತಿನಿತ್ಯದ ದಿನಚರಿ ಹೇಗಿತ್ತು ಗೊತ್ತೇ..?
Image Copyright : google.com