ಐಸಿಸಿ ಮಹಿಳಾ ವಿಶ್ವಕಪ್ ಟಿ-20 ಪಂದ್ಯದಲ್ಲಿ ಪೈನಲ್ ಪ್ರವೇಶಿಸಿ ಕಪ್ ಗೆಲ್ಲುವ ಕನಸು ಇಂಗ್ಲೆಂಡ್ ತಂಡದ ವಿರುದ್ದ 8 ವಿಕೆಟ್ ಗಳ ಸೋಲನ್ನು ಕಾಣುವ ಮೂಲಕ ನುಚ್ಚುನೂರಾಗಿದೆ. ಇಂದು ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಕರಾರುವಾಕ್ ಆದ ಆಟಕ್ಕೆ ಭಾರತೀಯ ವನಿತೆಯರ ತಂಡ ಶರಣಾಗಿದೆ.

ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ 19.3 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 112 ರನ್ನುಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.  ಈ ಸುಲಭ ಗುರಿಯನ್ನು ಬೆನ್ನತ್ತಿದ ಇಂಗ್ಲೆಡ್ 17.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಸುಲಭವಾಗಿ ಜಯಭೇರಿ ಭಾರಿಸಿತು.

ಭಾರತದ 13.4 ಓವರ್ ಗಳಲ್ಲಿ 89 ರನ್ನುಗಳನ್ನು ಗಳಿಸಿ ಸುಸ್ಥಿತಿಯನ್ನು ಕಾಯ್ದುಕೊಂಡಿದ್ದ ತಂಡ ಒಮ್ಮೆಲೆ ಕುಸಿತವನ್ನು ಕಂಡು 112 ಗಳಿಸುವ ಹೊತ್ತಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಭಾರತದ ಪರವಾಗಿ ಸ್ಮೃತಿ ಮಂದಣ್ಣ ಅವರು 24 ಎಸೆತಗಳಲ್ಲಿ 33 ರನ್, ಜೆಮಿಯಾ ರಾಡ್ರಿಗಸ್  ಅವರು 26 ಎಸೆತಗಳಲ್ಲಿ 26 ರನ್ ಮತ್ತು ಹರ್ಮನ್ ಪ್ರೀತ್ ಕೌರ್ ಅವರು 20ಎಸೆತಗಳಲ್ಲಿ 16 ರನ್ ಗಳ ಕೊಡುಗೆಯನ್ನು ನೀಡಿದರು.

ಭಾರತದ 113 ರನ್ನುಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ನ ಡೆನಿಯಲ್ ವೈಟ್ 15 ಎಸೆತಗಳಲ್ಲಿ  8 ರನ್ , ತಮ್ಸಿನ್ ಬ್ಯುಮೊಂಟ್ 3 ಎಸೆತಗಳಲ್ಲಿ  1 ರನ್, ಆಮಿ ಜೋನ್ಸ್  47 ಎಸೆತಗಳಲ್ಲಿ  53 ರನ್ ಮತ್ತು ನಟಾಲಿಯಾ ಸಿವರ್ 38 ಎಸೆತಗಳಲ್ಲಿ  52 ರನ್ನುಗಳನ್ನು ಗಳಿಸುವ ಮೂಲಕ 17.2 ಓವರ್ನಲ್ಲಿ 116 ರನ್ ಗಳಿಸಿ ಜಯವನ್ನು ತನ್ನದಾಗಿಸಿಕೊಂಡಿತು.

Image copyright : Google.com

 

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here