ಕೊರೋನಾ ಗೆದ್ದ ಸಂಗೀತ ಮಾಂತ್ರಿಕ ಎಸ್​​ ಪಿ ಬಾಲಸುಬ್ರಹ್ಮಣ್ಯಂ! ಗಾನಗಂಧರ್ವನಿಗೆ ಕೋವಿಡ್​​ ನೆಗೆಟಿವ್​​ ರಿಪೋರ್ಟ್​​!

sp-balasubramaniam-corona-negative-sp-charn

ನವದೆಹಲಿ: ಜನಪ್ರೀಯ ಬಹುಭಾಷಾ ಗಾಯಕ, ನಟ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ವರಧಿ ನೆಗೆಟಿವ್ ಬಂದಿದೆ ಎಂದು ಪುತ್ರ ಎಸ್ ಪಿ ಚರಣ್ ಅವರು ತಿಳಿಸಿದ್ದಾರೆ.

ಅಗಸ್ಟ್ 5 ರಂದು ಕೊರೊನಾ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಗಸ್ಟ್ 13 ರಿಂದ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿತು. ನಂತರ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ ಈ ಸಮಯದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳಿಂದ ಚಿಕಿತ್ಸೆಯನ್ನು ನೀಡಲಾಗಿತ್ತು. ಅವರ ಆರೋಗ್ಯ ಸುಧಾರಿಸಲೆಂದು ಅವರ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಹಲವರು ಪ್ರಾರ್ಥಿಸಿದ್ದರು.
[the_ad id=”4755″]
ಸ್ವಲ್ಪ ಚೇತರಿಸಿಕೊಂಡಿದ್ದ ಎಸ್ ಪಿ ಬಿ ಅವರ ಕೊರೊನಾ ಪರೀಕ್ಷೆ ನಡೆಸಲಾಗಿ ನೆಗೆಟಿವ್ ವರದಿ ಬಂದಿದೆ ಎಂದು ಅವರ ಪುತ್ರ ಎಸ್ ಪಿ ಚರಣ್ ಅವರು ತಿಳಿಸಿದ್ದಾರೆ.  19 ದಿನಗಳ ತೀವ್ರ ಹೋರಾಟದ ನಂತರ ಈ ವರದಿ ಅವರ ಪರಿವಾರ, ವೈದ್ಯಕೀಯ ತಂಡ ಮತ್ತು ಅಭಿಮಾನಿಗಳಿಗೆ ಸಂತಸ ತಂದಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ನೆಗೆಟಿವ್ ಬಂದಿದ್ದರೂ ಒಂದು ವಾರಗಳ ಕಾಲ ವೆಂಟಿಲೇಟರ್ ನಲ್ಲಿಯೇ ಚಿಕಿತ್ಸೆಯನ್ನು ಮುಂದುವರೆಸಲಾಗುತ್ತದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಇದನ್ನೂ ಓದಿರಿ: ಕನ್ನಡದ ಖ್ಯಾತ ಸಂಗೀತ ನಿರ್ದೇಶಕನಿಗೆ ಕೊರೊನಾ ದೃಡ ..!

ಎಸ್ ಪಿ ಬಾಲಸುಬ್ರಹ್ಮಣ್ಯಂ ಪತ್ನಿಗೂ ಸೋಂಕು
ಎಸ್ ಪಿ ಬಿಯವರ ಜೊತೆಗೆ ಅವರ ಪತ್ನಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರನ್ನೂ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅವರು ಸಂಪೂರ್ಣ ಗುಣಮುಖರಾಗಿದ್ದು, ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ.

LEAVE A REPLY

Please enter your comment!
Please enter your name here