ದಕ್ಷಿಣ ರೈಲ್ವೆಯು ವಿವಿಧ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಎಸ್ಎಸ್ಎಲ್ಸಿ ಜತೆಗೆ ಐಟಿಐ ಪಾಸ್ ಮಾಡಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಅರ್ಜಿ ಸಲ್ಲಿಸಲು ಜೂನ್ 30, 2021 ರವರೆಗೆ ಅವಕಾಶ ಇರುತ್ತದೆ.
ಒಟ್ಟು 3378 ಅಪ್ರೆಂಟಿಸ್ ಹುದ್ದೆಗಳನ್ನು ಈ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳ ಪೈಕಿ 936 ಕ್ಯಾರಿಯೇಜ್ ವರ್ಕ್ಸ್, 756 ಗೋಲ್ಡೆನ್ರಾಕ್ ವರ್ಕ್ಸ್ಶಾಪ್, 1686 ಹುದ್ದೆಗಳನ್ನು ಸಿಗ್ನಲ್ ಮತ್ತು ಟೆಲಿಕಾಮ್ ವರ್ಕ್ಶಾಪ್ನಲ್ಲಿ ನೇಮಕ ಮಾಡಲಾಗುತ್ತದೆ.
ವಿದ್ಯಾರ್ಹತೆ: ಎಸ್ಎಸ್ಎಲ್ಸಿ / ಐಟಿಐ / ಡಿಪ್ಲೊಮ ಪಾಸ್.
ವಯೋಮಿತಿ: ಕನಿಷ್ಠ 15 ವರ್ಷ ಪೂರೈಸಿರುವ, ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ: ರೂ.100 ಅರ್ಜಿ ಶುಲ್ಕ ಪಾವತಿಸಬೇಕು. ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 30-06-2021
(ಸೂಚನೆ: ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸಲು ಹೆಚ್ಚಿನ ಮಾಹಿತಿಗಾಗಿ ಅಧೀಕೃತ ಪ್ರಕಟಣೆ ಓದಿ ಮತ್ತು ಹೆಚ್ಚಿನ ಮಾಹಿತಿ ಮತ್ತು ಆನ್ ಲೈನ್ ಅರ್ಜಿ ಸಲ್ಲಿಕೆಗೆ +91 9620159964 ಗೆ ವಾಟ್ಸಪ್ ಮಾಡಿ. )
ಇದನ್ನೂ ಓದಿರಿ: ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 10,447 ಹುದ್ದೆಗಳಿಗೆ IBPS ಅಧಿಸೂಚನೆ (IBPS RRB RECRUITMENT 2021)