ಪರ್ತ್: ಕಳಪೆ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಭಾರತ ತಂಡ ಟಿ-20 ವಿಶ್ವ ಕಪ್‌ನಲ್ಲಿ ಗುಂಪು 2 ರ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್‌ಗಳ ಸೋಲನ್ನು ಅನುಭವಿಸಿದೆ.
ಇಂದು ನಡೆದ ಟಿ-20 ವಿಶ್ವ ಕಪ್‌ನಲ್ಲಿ ಗುಂಪು 2 ರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 133 ರನ್ನುಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು. ಭಾರತದ ಪರವಾಗಿ ಆಟ ಆರಂಭಿಸಿದ ಕೆ ಎಲ್ ರಾಹುಲ್ 9, ರೋಹಿತ್ ಶರ್ಮ 15, ವಿರಾಟ್ ಕೊಹ್ಲಿ 12 ರನ್ ಗಳನ್ನು ಗಳಿಸಲಷ್ಟೇ ಶಕ್ತರಾದರು. ಹಾಲಿ ವಿಶ್ವ ಕಪ್‌ನಲ್ಲಿ ಮೊದಲ ಅವಕಾಶ ಪಡೆದ ದೀಪಕ್ ಹೂಡ ಶೂನ್ಯ ಸಂಪಾದನೆ ಮಾಡಿದರು.
ಇದನ್ನೂ ಓದಿರಿ: BREAKING NEWS: ಗುಜರಾತ್ ನಲ್ಲಿ ನೂರಾರು ಜನರಿದ್ದ ಕೇಬಲ್ ಸೇತುವೆ ಕುಸಿತ; ರಕ್ಷಣಾ ಕಾರ್ಯ ಚುರುಕು
ಭಾರತೀಯ ಬ್ಯಾಟರ್ ಗಳು ಫೆವಿಲಿಯಂ ಪರೇಡ್ ಮಾಡುತ್ತಿದ್ದರೆ, ಸೂರ್ಯಕುಮಾರ್ ಯಾದವ್ ಒಬ್ಬಂಟಿಯಾಗಿ ಆಟವಾಡಿದರು. ಅತೀ ವೇಗವಾಗಿ ತಮ್ಮ 50 ರನ್ ಗಳನ್ನು ಕೇವಲ 30 ಎಸೆತಗಳಿಗೆ ಪೂರ್ಣಗೊಳಿಸಿದರು. ಅಲ್ಲದೇ ತಮ್ಮ ವಯಕ್ತಿಕ 68 ರನ್ನುಗಳನ್ನು ಕಲೆಹಾಕಿ ಕೇಶವ್ ಮಹಾರಾಜ ಅವರಿಗೆ ಕ್ಯಾಚ್ ನೀಡಿ ತೆರಳಿದರು. ಇದಾದ ನಂತರ ಯಾವೊಬ್ಬ ಆಟಗಾರನೂ ಹೇಳಿಕೊಳ್ಳುವಂತಹ ಆಟವಾಡಲಿಲ್ಲ.
ಇದನ್ನೂ ಓದಿರಿ: SSLC Exam Time Table: ಎಸ್ಎಸ್ಎಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ, ಆಕ್ಷೇಪಕ್ಕೆ ಅವಕಾಶ
ಭಾರತ ನೀಡಿದ ಸಣ್ಣ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲಿ ಚೇಸಿಂಗ್ ನಲ್ಲಿ ಕಳಪೆ ಪ್ರದರ್ಶನ ತೋರಿತಾದರೂ ನಂತರದಲ್ಲಿ ಸುಧಾರಿಸಿಕೊಂಡಿತು. ದಕ್ಷಿಣ ಆಫ್ರಿಕಾ ಪರವಾಗಿ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ (1), ತೆಂಬ ಬವುಮಾ (10) ಮತ್ತು ಯುವ ಬ್ಯಾಟರ್ ರಿಲೀ ರೊಸ್ಸೊ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ಮಾರ್ಕ್ರಮ್ ಹಾಗೂ ಡೇವಿಡ್ ಮಿಲ್ಲರ್ ಉತ್ತಮ ಆಟವಾಡಿ 76 ರನ್ನುಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾದರು. ಮಹತ್ವದ ಸಮಯದಲ್ಲಿ ಭಾರತ ತಂಡ ವಿಕೆಟ್ ಪಡೆದುಕೊಂಡರು ಡೇವಿಡ್ ಮಿಲ್ಲರ್ ತಮ್ಮ ತಂಡವನ್ನು ಜಯದ ಹಳಿಗೆ ತರುವಲ್ಲಿ ಯಶಸ್ವಿಯಾದರು.