ಮೈಸೂರು (ಸೆ. 29) : ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಇಂದು ಬೆಳಿಗ್ಗೆ ವೃಶ್ಚಿಕ ಲಘ್ನದಲ್ಲಿ ಸರ್ವಾಲಂಕೃತ ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಹಿರಿಯ ಸಾಹಿತಿ ಎಸ್ ಎಲ್ ಬೈರಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಇಂದು ಬೆಳಿಗ್ಗೆ 9.39 ರಿಂದ 10.25 ರ ನಡುವಿನ ವೃಶ್ಚಿಕ ಲಘ್ನದಲ್ಲಿ ಹಿರಿಯ ಸಾಹಿತಿ ಎಸ್ ಎಲ್ ಬೈರಪ್ಪ ಪುಷ್ಪಾರ್ಚನೆ ಮಾಡಿದರು. ಮೈಸೂರಿನಲ್ಲಿ ದಸರೆಯ ಕಳೆ ಕಟ್ಟಿದ್ದು, ಮೈಸೂರು ಅರಮನೆ ವಿದ್ಯುತ್ ದೀಪಗಳಿಂದ ರಾರಾಜಿಸುತ್ತಿದೆ. ಇದಲ್ಲದೇ ಮೈಸೂರಿನ ರಸ್ತೆಗಳು, ಸರಕಾರಿ ಕಛೇರಿಗಳು ಮತ್ತು ಪ್ರಸಿದ್ಧ ಕಟ್ಟಡಗಳು ಈ ನವರಾತ್ರಿಯಲ್ಲಿ ದೀಪಾಲಂಕಾರಗಳಿಂದ ಕಂಗೊಳಿಸುತ್ತವೆ.

ಇಂದಿನ ದಸರಾ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾತಕರಾದ ಬೈರಪ್ಪ, ಕಾರ್ಯಕ್ರಮದ ಅಧ್ಯಕ್ಷರಾದ ಜಿ ಟಿ ದೇವೇಗೌಡ, ಉಸ್ತುವಾರಿ ಸಚಿವರಾದ ವಿ ಸೋಮಣ್ಣಾ, ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಕೇಂದ್ರ ಸಚಿವರುಗಳಾದ ಸದಾನಂದ ಗೌಡ, ಪ್ರಲ್ಹಾದ ಜೋಷಿ, ಪ್ರವಾಸೋದ್ಯಮ ಸಚಿವ ಸಿ ಟಿ ರವಿ, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್ ಎ ರಾಮದಾಸ್ ಮತ್ತಿತರರು ಭಾಗಿಯಾಗಿದ್ದರು.