SJVN Recruitment 2022: ಸತ್ಲುಜ್ ಜಲ ವಿದ್ಯುತ್ ನಿಗಮದಲ್ಲಿ 80 ಹುದ್ದೆಗಳಿಗೆ ಅರ್ಜಿ ಆಹ್ವಾನ

sjvn-recruitment-2023-apply-for-80-various-posts

ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. SJVN Recruitment 2022 ರ ಅಧಿಸೂಚನೆಯ ಪ್ರಕಾರ ಫೀಲ್ಡ್ ಎಂಜಿನಿಯರ್ ಮತ್ತು ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು, ಒಟ್ಟು 80 ಹುದ್ದೆಗಳ ಭರ್ತಿಗೆ ಅವಕಾಶವಿದೆ.

ಕೇಂದ್ರ ಸರಕಾರಿ ಉದ್ಯೋಗವನ್ನು ಅರಸುತ್ತಿರುವ ಹಾಗೂ ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ (Satluj Jal Vidyut Nigam Limited)ನಲ್ಲಿ ಉದ್ಯೋಗ ಮಾಡಲು ಆಸಕ್ತರಾಗಿರುವ ಅಭ್ಯರ್ಥಿಗಳು ಜನವರಿ 10, 2023 ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 60,000 ವೇತನ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಇನ್ನಿತರ ಮಹತ್ವದ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮುಂದೆ ಉದ್ಯೋಗಕ್ಕೆ ಸಂಬಂಧಿಸಿದ ಅಧಿಕೃತ ನೋಟಿಫಿಕೇಶನ್ ಸಹ ಒದಗಿಸಲಾಗಿದ್ದು, ಸರಿಯಾಗಿ ಮತ್ತೊಮ್ಮೆ ಓದಿಕೊಂಡು ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.

ಹುದ್ದೆಯ ಮಾಹಿತಿ

ಫೀಲ್ಡ್​ ಎಂಜಿನಿಯರ್- 68

ಫೀಲ್ಡ್​ ಆಫೀಸರ್- 12

ವಿದ್ಯಾರ್ಹತೆ

ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು, ಅಧಿಸೂಚನೆಯ ಪ್ರಕಾರ ಫೀಲ್ಡ್​ ಎಂಜಿನಿಯರ್ ಹುದ್ದೆಗೆ ಸಿವಿಲ್/ಮೆಕ್ಯಾನಿಕಲ್/ಪರಿಸರ/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್​ನಲ್ಲಿ ಬಿಇ/ಬಿ.ಟೆಕ್ ಮಾಡಿರಬೇಕು.

ಫೀಲ್ಡ್​ ಆಫೀಸರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಸಿಎ/ಐಸಿಡಬ್ಲ್ಯೂಎ/ಸಿಎಂಎ/ ಎಂಬಿಎ/ ಪದವಿ/ ಸ್ನಾತಕೋತ್ತರ ಪದವಿ ಮಾಡಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.

ವಯೋಮಿತಿ

ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು, ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ವಯಸ್ಸು ಜನವರಿ 10, 2023 ಕ್ಕೆ ಕನಿಷ್ಠ 18 ಮತ್ತು ಗರಿಷ್ಠ ವಯಸ್ಸು 30 ವರ್ಷಗಳ ಒಳಗೆ ಇರುವುದು ಅವಶ್ಯವಾಗಿದೆ.

ಇನ್ನು ಅರ್ಜಿಯನ್ನು ಸಲ್ಲಿಸಲು ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ(NCL) 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಇನ್ನುಳಿದಂತೆ PH (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ, PH (ಒಬಿಸಿ) ಅಭ್ಯರ್ಥಿಗಳಿಗೆ 13 ವರ್ಷ, PH (ಎಸ್ಸಿ/ಎಸ್ಟಿ) ಅಭ್ಯರ್ಥಿಗಳಿಗೆ 15 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ

ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಜಿ ಶುಲ್ಕ ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಇನ್ನು ಸಾಮಾನ್ಯ/ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳು 600 ರೂ. ಪಾವತಿಸಬೇಕಾಗುತ್ತದೆ.

ವೇತನ

ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 60,000 ವೇತನ ನೀಡಲಾಗುವುದು. ಇದಲ್ಲದೇ ಆಯ್ಕೆಯಾದ ಅಭ್ಯರ್ಥಿಗಳನ್ನು ಇಡೀ ದೇಶದಲ್ಲಿ ನೇಮಕ ಮಾಡಲಾಗುತ್ತದೆ.

ಇದನ್ನೂ ಓದಿರಿ: AAI Recruitment 2023: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

  • SJVN Recruitment 2022 ರ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿರಿ. ಹುದ್ದೆಗೆ ಅರ್ಜಿ ಸಲ್ಲಿಸಲು ನೀಡಲಾದ ಮಾನದಂಡಗಳನ್ನು ನೀವು ಹೊಂದಿರುವಿರೆ ಎಂದು ಪರಿಶೀಲಿಸಿಕೊಳ್ಳಿ.
  • ನಂತರ ಅಲ್ಲಿ ಕೇಳಲಾದ ಸ್ವವಿವರ, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಕೆಲಸದ ಅನುಭವವಿದ್ದರೆ ದಾಖಲೆಗಳು ಮತ್ತು ಇತರ ಅಗತ್ಯ ದಾಖಲಾತಿಗಳನ್ನು ಪಿಡಿಎಫ್ ವಿಧಾನದಲ್ಲಿ ಸಿದ್ಧಪಡಿಸಿಕೊಳ್ಳಿ.
  • ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ ನಲ್ಲಿ ಖಾಲಿಯಿರುವ ಫೀಲ್ಡ್​ ಎಂಜಿನಿಯರ್ ಮತ್ತು ಫೀಲ್ಡ್​ ಆಫೀಸರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕೆಳಗೆ ನೀಡಲಾಗಿರುವ ಲಿಂಕನ್ನು ಕ್ಲಿಕ್ ಮಾಡಿ.
  • ನಂತರ ಆನ್ ಲೈನ್ ಅರ್ಜಿ ನಮೂನೆಯನ್ನು ತಪ್ಪದೆ ಭರ್ತಿ ಮಾಡಿ. ಅಲ್ಲದೇ ನಿಮ್ಮ ಇತ್ತೀಚಿನ ಭಾವಚಿತ್ರ ಮತ್ತು ಅಗತ್ಯ ದಾಖಲಾತಿಗಳನ್ನು ಪೂರೈಕೆ ಮಾಡಿ.
  • ನಿಮ್ಮ ವರ್ಗಕ್ಕೆ ವಿಧಿಸಲಾಗಿರುವ ಅರ್ಜಿ ಶುಲ್ಕವನ್ನು ಪಾವತಿಸಿ.
  • ಮತ್ತೊಮ್ಮೆ ನೀವು ಸಲ್ಲಿಸಿರುವ ಮಾಹಿತಿಗಳು ಸರಿಯಾಗಿವೆಯೇ… ಸರಿಯಾಗಿ ಅಪ್ ಲೋಡ್ ಆಗಿವೆಯೇ ಪರಿಶೀಲಿಸಿ.
  • ನಂತರ ನಂತರ ನಿಮ್ಮ ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ಕಾಪಿ ತೆಗೆದುಕೊಳ್ಳಿ.

ಆಯ್ಕೆ ಪ್ರಕ್ರಿಯೆ

ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಟೆಸ್ಟ್, ಲಿಖಿತ ಪರೀಕ್ಷೆ, ಗ್ರೂಪ್ ಡಿಸ್ಕಷನ್ ಮತ್ತು ಸಂದರ್ಶದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/12/2022

ಅರ್ಜಿ ಸಲ್ಲಿಸಲು ಕೊನೆ ದಿನ: 10/01/2023

ಪ್ರಮುಖ ಲಿಂಕುಗಳು

ಅಧಿಕೃತ ನೋಟಿಫಿಕೇಶನ್: ಕ್ಲಿಕ್ ಮಾಡಿ

ಅಧಿಕೃತ ವೆಬ್ ಸೈಟ್: ಕ್ಲಿಕ್ ಮಾಡಿ

ಅರ್ಜಿಯನ್ನು ಸಲ್ಲಿಸಿ: ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here