ಯಾರಿಗೆ ಒಲಿಯಲಿದೆ ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರಗಳು ? ಮೊದಲ ಸುತ್ತಿನ ಮತ ಎಣಿಕೆಯ ಫಲಿತಾಂಶ ನೋಡಿ..

sira-tumkur-rr-nagar-by-election-election-results-bjp-congress-jds

ಆರ್ ಆರ್ ನಗರ ಮತ್ತು ಶಿರಾ ಉಪಚುನಾವಣಾ ಮತ ಎಣಿಕೆ ಪ್ರಾರಂಭವಾಗಿದ್ದು, ಕಾಂಗ್ರೆಸ್ ನ ಕುಸುಮಾ, ಬಿಜೆಪಿಯ ಮುನಿರತ್ನ ಮತ್ತು ಜೆಡಿಎಸ್ ನ ಕೃಷ್ಣಮೂರ್ತಿ ಅವರ ಭವಿಷ್ಯ ಹೊರಬೀಳಲಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಿತು. ನಂತರದಲ್ಲಿ ಇವಿಎಂ ಯಂತ್ರಗಳಲ್ಲಿನ ಎಣಿಕೆ ಕಾರ್ಯವು ಪ್ರಾರಂಭವಾಗಿದೆ. ಸದ್ಯ ಮೊದಲ ಹಂತದ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಮುನ್ನಡೆಯನ್ನು ಗಳಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜರಾಜೇಶ್ವರಿ ನಗರ ತೀವ್ರ ಜಿದ್ದಾ ಜಿದ್ದಿನ ಕಣವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಅಬ್ಬರದ ಪ್ರಚಾರವನ್ನು ಕೈಗೊಂಡಿದ್ದವು. ಆದರೆ ಮೊದಲ ಸುತ್ತಿನ ಫಲಿತಾಂಶ ಹೊರಬಿದ್ದ ನಂತರ ಬಿಜೆಪಿ (ಮುನಿರತ್ನ) 6164 ಮತಗಳನ್ನು, ಕಾಂಗ್ರೆಸ್ (ಕುಸುಮಾ) 2915 ಮತ್ತು ಜೆಡಿಎಸ್ (ಕೃಷ್ಣಪೂರ್ತಿ) 136 ಮತಗಳನ್ನು ಗಳಿಸಿದ್ದಾರೆ. ಇದರೊಂದಿಗೆ ಮುನಿರತ್ನ ಅವರು ಮೊದಲ ಸುತ್ತಿನ ಮತ ಎಣಿಕೆಯಲ್ಲಿ 3000 ಕ್ಕೂ ಅಧಿಕ ಮತಗಳಿಂದ ಮುಂದಿದ್ದಾರೆ.

ಇದನ್ನೂ ಓದಿರಿ: ಯಾರಿಗೆ ಒಲಿಯಲಿದೆ ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರಗಳು ? ಮೊದಲ ಸುತ್ತಿನ ಮತ ಎಣಿಕೆಯ ಫಲಿತಾಂಶ ನೋಡಿ..

ಇನ್ನು ತುಮಕೂರಿನ ಶಿರಾ ಕ್ಷೇತ್ರದಲ್ಲಿಯೂ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮೊದಲ ಸುತ್ತಿನ ಮತ ಎಣಿಕೆಯ ನಂತರ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇಲ್ಲಿ ಸ್ಪರ್ದಿಸಿದ್ದ ಬಿಜೆಪಿಯ (ರಾಜೇಶ್ ಗೌಡ) 3224, ಕಾಂಗ್ರಸ್ (ಟಿ. ಬಿ. ಜಯಚಂದ್ರ) 2329 ಮತ್ತು ಜೆಡಿಎಸ್ (ಅಮ್ಮ ಜಮ್ಮ ) 1135 ಮತಗಳನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here