ಬೆಂಗಳೂರು: ಕಳೆದ ಮೂರು ವಾರಗಳಿಂದ ಸತತವಾಗಿ ಪೆಟ್ರೋಲ್ ದರ ಏರುತ್ತಿರುವ ಹಿನ್ನೆಲೆಯಲ್ಲಿ ದರ ಏರಿಕೆ ಖಂಡಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸೈಕಲ್ ಸವಾರಿ ಮಾಡುವ ಮೂಲಕ ಪ್ರತಿಭಟನೆ ಮಾಡಿದರು.
ಇಂದು ಬೆಳಿಗ್ಗೆ ಸಿದ್ದರಾಮಯ್ಯ, ಶಿವಾನಂದ ವೃತ್ತದ ಬಳಿಯ ತಮ್ಮ ನಿವಾಸದಿಂದ ಸೈಕಲ್ ಏರಿ ಕೆಪಿಸಿಸಿ ಕಛೇರಿಯ ವರೆಗೆ ನಡೆಯುವ ಮೂಲಕ ಪ್ರತಿಭಟನೆಯನ್ನು ಮಾಡಿದರು. ಈ ಸಮಯದಲ್ಲಿ ಜಮೀರ್ ಅಹಮ್ಮದ್, ಚೆಲುವರಾಯ ಸ್ವಾಮಿ ಕೂಡಾ ಜೊತೆಯಲ್ಲಿದ್ದರು. ಇಂಧನ ಬೆಲೆ ಸತತ ಏರಿಕೆಯನ್ನು ಕಂಡಿಸಿ ಸಿದ್ದರಾಮಯ್ಯ ನೇತ್ರತ್ವದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಬಳಿಯ ಜನರಲ್ ಪೋಸ್ಟ್ ಆಪಿಸ್ ಹತ್ತಿರ ಪ್ರತಿಭಟನೆಯನ್ನು ನಡೆಸಲಿದ್ದಾರೆ.
ಪೆಟ್ರೋಲ್ ದರ ಏರಿಕೆ ಖಂಡಿಸಿ ಪ್ರತಿಬಟನೆಯಲ್ಲಿ ಡಿಕೆಶಿ ಬಾಗಿ:
ಪೆಟ್ರೋಲ್ ದರ ಏರಿಕೆಯ ವಿರುದ್ಧ ಕಾಂಗ್ರೆಸ್ ಬ್ರಹತ್ ಪ್ರತಿಭಟನೆಯನ್ನು ಇಂದು ಹಮ್ಮಿಕೊಂಡಿದ್ದು, ಅದರಂತೆ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರೂ ಸಹ ಸದಾಶಿವನಗರದ ತಮ್ಮ ಮನೆಯಿಂದ ಕೆಪಿಸಿಸಿ ಕಛೇರಿಯವರೆಗೆ ಸೈಕಲ್ ನಲ್ಲಿ ಆಗಮಿಸಿದರು. ಈ ಸಮಯದಲ್ಲಿ ರಾಮಲಿಂಗಾ ರೆಡ್ಡಿ, ಈಶ್ವರ್ ಖಂಡ್ರೆ, ಹೆಚ್ ಎಂ ರೇವಣ್ಣ, ಆರ್ ವಿ ದೇಶಪಾಂಡೆ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಾತ್ ನೀಡಿದರು.
ಇದನ್ನೂ ಓದಿರಿ:ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳ ಗಮನಕ್ಕೆ ವಿಶೇಷ ಮಾಹಿತಿ