ಚೆನ್ನೈ: ತುಮಕೂರಿನ ಸಿದ್ದಗಂಗಾ ಮಠದ ಶತಾಯುಷಿ ಶ್ರೀ ಶಿವಕುಮಾರ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಏರಿಳಿತಗಳು ಕಂಡುಬಂದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ರೇಲಾ ಆಸ್ಪತ್ರೆಗೆ ದಾಕಲಿಸಲಾಗಿದೆ.

ರೇಲಾ ಇನ್ಸ್ಟಿಟ್ಯೂಟ್  ಅಂಡ್ ಮೆಡಿಕಲ್ ಸೆಂಟರ್ ನ  ಪ್ರಸಿದ್ಧ ವೈದ್ಯರಾದ ಮಹಮ್ಮದ್ ರೇಲಾ ಅವರು ಶ್ರೀಗಳ ಚಿಕಿತ್ಸೆಯ ಜವಾಬ್ದಾರಿಯನ್ನು ಹೊರಿಸಲಾಗಿದೆ. ಇಂದು ತುಮಕೂರಿನಿಂದ ಬೆಂಗಳೂರಿಗೆ ಆಗಮಿಸಿದ ಶ್ರೀಗಳು ಅಲ್ಲಿಂದ ಏರ್  ಅಂಬುಲನ್ಸ್ ಮೂಲಕ ಚೆನ್ನೈನ ಆಸ್ಪತ್ರೆಗೆ ದಾಕಲಾಗಿದ್ದಾರೆ. ಪಿತ್ತಕೋಶ ಸಂಬಂಧಿ ತೊಂದರೆಗಳಿಂದ ಬಳಲುತ್ತಿರುವ ಶ್ರೀಗಳನ್ನು ಪ್ರಸಿದ್ಧ ಗಿನ್ನಿಸ್ ದಾಖಲೆ ನಿರ್ಮಿತ ಪ್ರಸಿದ್ಧ ವೈದ್ಯರಾದ ರೇಲಾ ಅವರು ಚಿಕಿತ್ಸೆ ನೀಡುತ್ತಿದ್ದು, ಅವರ ಆರೋಗ್ಯದ ಕುರಿತಾದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.

ಈ ಹಿಂದೆಯೂ ಅನೇಕ ಬಾರಿ ಅರೋಗ್ಯ ತೊಂದರೆಗೆ ಒಳಗಾಗಿದ್ದು, ಹಲವು ಬಾರಿ ಎಂಡೋಸ್ಕೋಪಿ  ಮಾಡಿಸಿದ್ದರು. ಅಲ್ಲದೇ ಅನೇಕ ಸ್ಟಂಟ್ ಅಳವಡಿಕೆಯನ್ನು ಮಾಡಲಾಗಿದೆ. ಶ್ರೀಗಳ ಆರೋಗ್ಯದ ಮೇಲೆ ತೀವ್ರನಿಗಾ ಇಡಲಾಗಿದ್ದು, ಇನ್ನೂ ಮೂರ್ನಾಲ್ಕು ದಿನ ಚಿಕಿತ್ಸೆ ಪಡೆಯುವ ಸಾಧ್ಯತೆಯಿದೆ.

 

Image Copyright : google.com

LEAVE A REPLY

Please enter your comment!
Please enter your name here