ಶ್ರದ್ಧಾ ಕೊಲೆ ಕೇಸ್: ಆರೋಪಿ ಅಫ್ತಾಬ್ ನ್ಯಾಯಾಂಗ ಬಂಧನ ಅವಧಿ ನಾಲ್ಕು ದಿನ ವಿಸ್ತರಣೆ

shraddha-murder-case-court-extends-the-judicial-custody-of-accused-aftab-poonawala-for-4-days

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ಕೊಲೆ ಪ್ರಕರಣದ ತನಿಖೆ ವೇಗವಾಗಿ ನಡೆಯುತ್ತಿದ್ದು, ಆರೋಪಿ ಅಫ್ತಾಬ್ ಪೂನಾವಾಲಾನ ನ್ಯಾಯಾಂಗ ಬಂಧನದ ಅವಧಿಯನ್ನು ನಾಲ್ಕುದಿನ ವಿಸ್ತರಿಸಿ ದೆಹಲಿ ಸಾಕೇತ್ ಕೋರ್ಟ್ ಆದೇಶ ಹೊರಡಿಸಿದೆ.

ಇಂದು ವಿಚಾರಣೆ ನಡೆಸಿದ ದೆಹಲಿ ಕೋರ್ಟ್ ಆರೋಪಿ ಅಫ್ತಾಬ್ ಪೂನಾವಾಲಾನ ನ್ಯಾಯಾಂಗ ಬಂಧನದ ಅವಧಿಯನ್ನು ನಾಲ್ಕು ದಿನಗಳ ಮಟ್ಟಿಗೆ ಹೆಚ್ಚಿಸಿದೆ. ಆತನನ್ನು ಜನವರಿ 10 ರಂದು ಮತ್ತೆ ನ್ಯಾಯಾಲಯಕ್ಕೆ ತರುವಂತೆ ಆದೇಶವನ್ನು ನೀಡಿದೆ.

ಕೋರ್ಟ್ ಸಮ್ಮುಖದಲ್ಲಿ ಆರೋಪಿ ಅಫ್ತಾಬ್ ಪರ ವಕೀಲ ಆತನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ಪೊಲೀಸರಿಂದ ಮರಳಿ ಕೊಡಿಸುವಂತೆ ವಿನಂತಿ ಮಾಡಿಕೊಂಡರು. ಆರೋಪಿಯು ಜೈಲಿನಲ್ಲಿ ತೀವ್ರ ಚಳಿಯಿಂದ ನರಳುತ್ತಿದ್ದು, ಆತನ ಬಳಿಯಲ್ಲಿ ಸೂಕ್ತ ಬಟ್ಟೆಗಳಿಲ್ಲ ಎಂದು ಕೋರ್ಟ್ ಮೊರೆ ಹೋದರು.

ಆರೋಪಿ ಅಫ್ತಾಬ್ ತನ್ನ ಬ್ಯಾಂಕ್ ಖಾತೆಯಲ್ಲಿ ಸ್ವಲ್ಪ ಹಣವನ್ನು ಹೊಂದಿದ್ದು, ಅದರಿಂದ ಈ ಚಳಿಗಾಲಕ್ಕಾಗಿ ಸೂಕ್ತ ಬಟ್ಟೆಗಳನ್ನು ಖರೀದಿಸಬೇಕಿದೆ. ಆದ್ದರಿಂದ ಆತನ ಡೆಬಿಟ್ ಕಾರ್ಡ್ ಹಾಗೂ ವಾಲೆಟ್ ನ್ನು ಪೊಲೀಸರಿಂದ ಕೊಡಿಸಬೇಕೆಂದು ಬೇಟಿಕೆಯಿಟ್ಟಿದ್ದ.

ಇದನ್ನೂ  ಓದಿರಿ: ಜಮ್ಮು & ಕಾಶ್ಮೀರ ಭಾರತದಿಂದ ಬೇರ್ಪಡಿಸಲಾಗದ ಭಾಗ: ಪಾಕ್‌ಗೆ ಎಂಇಎ ತಿರುಗೇಟು

LEAVE A REPLY

Please enter your comment!
Please enter your name here