ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾನನ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಕಾಲ ಹೆಚ್ಚಿಸಿ ದೆಹಲಿ ಸಾಕೇತ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಡಿಸೆಂಬರ್ 24 ರಂದು ಅಫ್ತಾಬ್ ಪೂನಾವಾಲಾನ ಧ್ವನಿ ಮಾದರಿಯನ್ನು ಪಡೆಯಲು ಅನುಮತಿಯನ್ನು ಕೋರಿ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಆರೋಪಿಯ ಧ್ವನಿ ಮಾದರಿ ಪರೀಕ್ಷೆಗೆ ಅನುಮತಿ ನೀಡಿರುವ ಕೋರ್ಟ್, ‘ರಿತೇಶ್ ಸಿನ್ಹಾ ವರ್ಸಸ್ ಸ್ಟೇಟ್ ಯುಪಿ’ ನಲ್ಲಿ ಭಾರತದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿ, “ಒಬ್ಬ ವ್ಯಕ್ತಿಯನ್ನು ತನ್ನ ಧ್ವನಿಯ ಮಾದರಿಯನ್ನು ನೀಡುವಂತೆ ಒತ್ತಾಯಿಸುವ ನ್ಯಾಯಾಂಗ ಆದೇಶವು ಭಾರತದ ಸಂವಿಧಾನದ ಆರ್ಟಿಕಲ್ 20 (3) ಅಡಿಯಲ್ಲಿ ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸುವುದಿಲ್ಲ” ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಇದನ್ನೂ ಓದಿರಿ: ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಕಾಂತಾರ: ಎರಡು ವಿಭಾಗಗಳಲ್ಲಿ ನಾಮ ನಿರ್ದೇಶನ
ಈ ಮೂಲಕ ಶ್ರದ್ಧಾ ವಾಕರ್ ಕೊಲೆ ಆರೋಪಿಯ ಧ್ವನಿ ಮಾದರಿಯನ್ನು ಪಡೆದುಕೊಳ್ಳಲು ದೆಹಲಿ ಪೊಲೀಸರಿಗೆ ಅನುಮತಿಯನ್ನು ನೀಡಿದೆ. ಇದಲ್ಲದೇ ಆತನ ನ್ಯಾಯಾಂಗ ಬಂಧನದ ಅವಧಿಯನ್ನೂ ವಿಸ್ತರಿಸಿ ಆದೇಶವನ್ನು ಹೊರಡಿಸಲಾಗಿದೆ.
ಇದನ್ನೂ ಓದಿರಿ: ಚಳಿಗೆ ತತ್ತರಿಸಿದ ರಾಜ್ಯ: ಶೀತಗಾಳಿ ಬೀಸುವ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ !