ನವದೆಹಲಿ: ಶ್ರದ್ಧಾ ಹತ್ಯೆ ಪ್ರಕರಣದ ತನಿಖೆಯಲ್ಲಿ ದೆಹಲಿ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ದೆಹಲಿ ಪೊಲೀಸರು ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಮಾನವ ತಲೆಬುರುಡೆ ಮತ್ತು ದವಡೆಯ ಭಾಗವನ್ನು ಪತ್ತೆ ಮಾಡಿದ್ದಾರೆ. ಇದು ಶ್ರದ್ಧಾ ವಾಲ್ಕರ್ ಅವರ ದೇಹದ ಭಾಗವೇ ಎಂದು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಭಾನುವಾರ, ದೆಹಲಿ ಪೊಲೀಸ್ ತಂಡವು ಅಫ್ತಾಬ್ ನನ್ನು, ಛತ್ತರ್‌ಪುರ ಪಹಾರಿ ಪ್ರದೇಶದಲ್ಲಿ ಅವರು ನೆಲೆಸಿದ್ದ ಮನೆಗೆ ಕರೆದೊಯ್ದಿದ್ದರು. ಅಲ್ಲಿ ಶ್ರದ್ಧಾಳ ಬ್ಯಾಗ್ ಅನ್ನು ವಶಪಡಿಸಿಕೊಂಡಿದ್ದು ಆಕೆ ಕೆಲವು ಬಟ್ಟೆಗಳು ಮತ್ತು ಶೂಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿರಿ: ಆಟೋದಲ್ಲಿ ನಿಗೂಢ ಸ್ಫೋಟ: ಓರ್ವನನ್ನು ವಶಕ್ಕೆ ಪಡೆದ ಪೊಲೀಸರು

ಶತಾಯ ಗತಾಯ ಶ್ರದ್ಧಾ ದೇಹದ ಎಲುಬು, ತಲೆ ಬುರುಡೆ ಮತ್ತು ಹತ್ಯೆಗೆ ಬಳಸಿದ ಆಯುಧ ಪತ್ತೆಮಾಡಲೇ ಬೇಕು ಎಂದು ಜಿದ್ದಿಗೆ ಬಿದ್ದಿದ್ದು, ಇಂದು ದೊಡ್ಡ ಪ್ರಮಾಣದಲ್ಲಿ ಯಶಸ್ಸು ದೊರೆತಿದೆ. ಸುಮಾರು 200 ಪೊಲೀಸರ ತಂಡವು ಶೋಧ ಕಾರ್ಯಾಚರಣೆಗಾಗಿ ಮೆಹ್ರೌಲಿ ಅರಣ್ಯಕ್ಕೆ ತಲುಪಿತು. ಶೋಧ ಕಾರ್ಯಾಚರಣೆಯಲ್ಲಿ, ಪೊಲೀಸ್ ತಂಡವು ಅರಣ್ಯದಿಂದ ಕೆಲವು ಅವಶೇಷಗಳು ಮತ್ತು ಕತ್ತರಿಸಿದ ಮೂಳೆಗಳನ್ನು ವಶಪಡಿಸಿಕೊಂಡಿದೆ.
ಇದಲ್ಲದೇ ಅಫ್ತಾಬ್ ತಲೆಬುರುಡೆ ಎಸೆದಿದ್ದೇನೆ ಎನ್ನಲಾದ ಮೈದಂಗರ್ಹಿ ಪ್ರದೇಶದ ಕೊಳದಲ್ಲಿ ಶೋಧ ಕಾರ್ಯಾಚರಣೆಗೆ ಇಳಿದಿದ್ದರು. ದೆಹಲಿ ಪೊಲೀಸರು ಮುನ್ಸಿಪಲ್ ಕಾರ್ಪೊರೇಷನ್ ಜೊತೆ ಸೇರಿ ಕೊಳದ ಸುಮಾರು 1000 ಲೀಟರ್ ನೀರನ್ನು ಕೆರೆಯಿಂದ ಹೊರ ತೆಗೆದು ಶೋಧ ಕಾರ್ಯಾಚರಣೆ ನಡೆಸಿದರು.
ಇದನ್ನೂ ಓದಿರಿ: IND vs NZ: 2ನೇ ಟಿ-20 ಪಂದ್ಯದಲ್ಲಿ ಭಾರತಕ್ಕೆ 65 ರನ್ನುಗಳ ಭರ್ಜರಿ ಜಯ