ಚಂಡಿಪುರ: ಒಡಿಶಾ ಕರಾವಳಿಯ ರಾಕೆಟ್ ಉಡ್ಡಯನ ಕೇಂದ್ರದಿಂದ ಅಲ್ಪ ಶ್ರೇಣಿಯ ಬ್ಯಾಲೆಸ್ಟಿಕ್ ಪ್ರಥ್ವಿ-2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವುಯಾಗಿ ಮಾಡಲಾಗಿದೆ. ಪ್ರಥ್ವಿ ಶ್ರೇಣಿಯ ಈ ಕ್ಷಿಪಣಿಯನ್ನು ಹೆಚ್ಚು ನಿಖರ ಮತ್ತು ನೂತನ ತಂತ್ರಜ್ಞಾನದೊಂದಿಗೆ ಡಿಅರ್‌ಡಿಒ ಭಿವೃದ್ಧಿಪಡಿಸಿದ್ದು, ಯಶಸ್ವಿ ಉಡಾವಣೆಯ ಮೂಲಕ ದೇಶಕ್ಕೆ ಮತ್ತೊಂದು ಸಾಧನೆಯ ಹಿರಿಮೆಯನ್ನು ತಂದಿದೆ.
ಒಡಿಶಾ ಕರಾವಳಿಯಲ್ಲಿರುವ ಚಂಡಿಪುರ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಿಂದ ಮಂಗಳವಾರ ಈ ಪರೀಕ್ಷೆಯನ್ನು ಮಾಡಲಾಯಿತು. ಪ್ರಥ್ವಿ-2 ಕ್ಷಿಪಣಿಯೂ ಭಾರತದ ಪರಮಾಣು ದಾಳಿಯ ನಿಗ್ರಹಕ್ಕೆ ಅವಶ್ಯವಾಗಿದ್ದು, ಮೊದಲಿಗಿಂತಲೂ ಹೆಚ್ಚಿನ ನಿಖರತೆಯೊಂದಿಗೆ ತನ್ನ ಗುರಿಯನ್ನು ತಲುಪಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಈ ಪ್ರಥ್ವಿ-2 ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದ್ದು, ಪರೀಕ್ಷೆಯು ಎಲ್ಲ ನಿಯತಾಂಕಗಳನ್ನು ಯಶಸ್ವಿಯಾಗಿ ತಲುಪಿದೆ. ನೆಲದಿಂದ ನೆಲಕ್ಕೆ ಪ್ರಯೋಗಿಸಬಲ್ಲ ಪರಮಾಣು ಸಾಮರ್ಥ್ಯದ ಕ್ಷಿಪಣಿ ಇದಾಗಿದೆ. ಸದ್ಯ 350 ಕಿ. ಮೀ. ದೂರದ ಗುರಿಯನ್ನು ನಿಗಧಿಪಡಿಸಿದ್ದು, ಯಶಸ್ವಿಯಾಗಿ ತಲುಪಿದೆ ಎಂದು ಡಿಅರ್‌ಡಿಒ ಮಾಹಿತಿ ನೀಡಿದೆ.
ಇದನ್ನೂ ಓದಿರಿ: ಭಾರತೀಯ ಸೇನೆ ವಿರುದ್ಧ ಟ್ವೀಟ್: ಶೆಹ್ಲಾ ರಶೀದ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ
ಈ ಹಿಂದೆ 2003 ರಲ್ಲಿಯೇ ಪ್ರಥ್ವಿ-2 ಕ್ಷಿಪಣಿಯನ್ನು ಸೇನೆಗೆ ಸೇರ್ಪಡೆ ಮಾಡಲಾಗಿದ್ದು, ಆದರೆ ಇದೀಗ ಕ್ಷಿಪಣಿಯ ವಿವಿಧ ಸಾಮರ್ಥ್ಯ, ತಂತ್ರಜ್ಞಾನ ಮತ್ತು ಕೆಲ ಫೀಚರ್ ಗಳನ್ನು ಹೆಚ್ಚಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಕ್ಷಿಪಣಿಯು 500 ಕಿ. ಮೀ. ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯ ದಾಳಿ ಸಾಮರ್ಥ್ಯವನ್ನು ರಾಡಾರ್, ಎಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಮೂಲಕ ವಿಶ್ಲೇಷಿಸಲಾಗಿದ್ದು, ಕರಾರುವಕ್ಕಾದ ಫಲಿತಾಂಶ ಕೊಟ್ಟಿದೆ.
ಇದನ್ನೂ ಓದಿರಿ: ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 73ನೇ ಶತಕ ಸಿಡಿಸಿ ದಾಖಲೆ ಬರೆದ ಕೊಹ್ಲಿ