ಬಿಎಂಟಿಸಿ ವಜ್ರ ಬಸ್ ಪ್ರಯಾಣಿಕರಿಗೆ ಶಾಕ್: ದರ ಹೆಚ್ಚಳ

shock-for-bmtc-vajra-bus-passengers-rate-hike

ಬೆಂಗಳೂರು: ಹೊಸವರ್ಷದ ಆರಂಭದಲ್ಲಿಯೇ ಬಿಎಂಟಿಸಿ ವಜ್ರ ಗ್ರಾಹಕರಿಗೆ ಶಾಕ್ ನೀಡಿದೆ. ಗುರುವಾರದಿಂದ ದೂರದ ಬಿಎಂಟಿಸಿ ವಜ್ರ ಪ್ರಯಾಣದ ದರ ಹೆಚ್ಚಳ ಮಾಡುವ ಕುರಿತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ.

ವಜ್ರ ವಾಹನದಲ್ಲಿ 20 ಕಿ.ಮೀ ವಯಸ್ಕರ ಪ್ರಯಾಣಕ್ಕೆ ಈ ಹಿಂದೆ 45 ರೂ. ಇತ್ತು. ಗುರುವಾರದಿಂದ 20 ಕಿ.ಮೀ ವಯಸ್ಕರ ಪ್ರಯಾಣಕ್ಕೆ 50 ರೂ. ನಿಗದಿ ಮಾಡಲಾಗಿದೆ. 21 ಕಿ.ಮೀ ವಯಸ್ಕರ ಪ್ರಯಾಣಕ್ಕೆ ಈ ಹಿಂದೆ 50 ರೂ. ಇದ್ದು, ಗುರುವಾರದಿಂದ 21 ಕಿ.ಮೀ ವಯಸ್ಕರ ಪ್ರಯಾಣಕ್ಕೆ 55 ರೂ. ಮಾಡಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿರಿ: ಸಕ್ರಿಯ ರಾಜಕೀಯಕ್ಕೆ ಗುಡ್ ಬೈ ಹೇಳಿದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ !

LEAVE A REPLY

Please enter your comment!
Please enter your name here