ಶಿವಮೊಗ್ಗ : ನಟ ವಿಜಯ ರಾಘವೇಂದ್ರ ಪ್ರವಾಸಕ್ಕೆಂದು ಜಿಲ್ಲೆಗೆ ಬಂದಿದ್ದರು. ಅವರ ಐಷಾರಾಮಿ ಕಾರು ಪೆಟ್ರೋಲ್ ಬಂಕಿಗೆ ಬಂದು ನಿಲ್ಲುತ್ತಿದ್ದಂತೆ ನೆಚ್ಚಿನ ನಟನನ್ನು ನೋಡಿದ ಖುಷಿಯಲ್ಲಿ ಪೆಟ್ರೋಲ್ ಬದಲು ಡೀಸೆಲ್ ತುಂಬಿದ ಘಟನೆ ನಡೆದಿದೆ.
ಜಿಲ್ಲೆಯ ಪ್ರಸಿದ್ಧ ಜೋಗ ಜಲಪಾತಕ್ಕೆ ನಟ ವಿಜಯ ರಾಘವೇಂದ್ರ ಅವರು ತಮ್ಮ ಕುಟುಂಬದೊಂದಿಗೆ ಜೋಗ್ ಫಾಲ್ಸ್ ನೋಡಲು ಭೇಟಿ ನೀಡಿದ್ದರು. ಬೆಂಗಳೂರಿಗೆ ಹಿಂತಿರುಗಲು ನಗರದ ಪ್ರತಿಷ್ಟಿತ ಬಂಕ್ ಗೆ ಪೆಟ್ರೋಲ್ ಹಾಕಿಸಲು ತಮ್ಮ ಕಾರನ್ನು ತಂದು ನಿಲ್ಲಿಸಿದ್ದಾರೆ. ಆಗ ಸಿಬ್ಬಂದಿ ನಟನನ್ನು ಗುರುತಿಸಿ, ಖುಷಿಯ ಅಮಲಿನಲ್ಲಿ ಕಾರ್ ಗೆ ಪೆಟ್ರೋಲ್ ಹಾಕುವ ಬದಲು ಡೀಸೆಲ್ ಹಾಕಿ ಎಡವಟ್ಟು ಮಾಡಿದ್ದಾನೆ.
ಇದನ್ನೂ ಓದಿರಿ: ಬೃಹ್ಮಗಿರಿ ದುರಂತ: ಐದು ದಿನಗಳ ಬಳಿಕ ಪತ್ತೆಯಾದ ನಾರಾಯಣ ಆಚಾರ್ ಮೃತದೇಹ
ಇದಾದ ನಂತರ ಮಾಲೀಕರು ಮದ್ಯಪ್ರವೇಶಿಸಿ ಕ್ಷಮೆ ಕೇಳಿ ಕಾರನ್ನು ಸ್ಥಳೀಯ ಗ್ಯಾರೇಜ್ ನಲ್ಲಿ ರಿಪೇರಿಗೆಂದು ಕಳುಹಿಸಿ ಕೊಡಲಾಗಿದೆ. ಬಳಿಕ ವಿಜಯ ರಾಘವೇಂದ್ರ ಮತ್ತು ಅವರ ಕುಟುಂಬ ಮತ್ತೊಂದು ಕಾರ್ ನಲ್ಲಿ ಬೆಂಗಳೂರಿನತ್ತ ಪ್ರಯಾಣ ಮಾಡಿದ್ದಾರೆ.
ಈ ಘಟನೆಯ ಬಳಿಕ ಪತ್ರಿಕೆಯವರು ವಿಜಯ ರಾಘವೇಂದ್ರ ಅವರನ್ನು ಮಾತನಾಡಿಸಲು ಪ್ರಯತ್ನಿಸಿದಾಗ, ಪ್ರತಿಕ್ರೀಯೆ ನೀಡಲು ನಿರಾಕರಿಸಿದರು. ಈ ಅಚಾತುರ್ಯದ ಘಟನೆಯಿಂದ ಸಮಾಧಾನ ಹೊಂದಿರುವಂತೆ ಕಂಡು ಬಂದರು.
ವಾರ್ತಾವಾಣಿ ನಿಮಗೆ ಆಪ್ತವೇ ? ಇಲ್ಲಿ ಪ್ರಕಟವಾಗುವ ಸುದ್ದಿ ಮತ್ತು ಲೇಖನಗಳನ್ನು ಓದಲು ಬಯಸುವಿರೇ ? ಹಾಗಾದರೆ ತಪ್ಪದೆ ನೋಟಿಫಿಕೇಷನ್ ಪಡೆಯಲು ನಮ್ಮ ಟೆಲಿಗ್ರಾಮ್ ಗ್ರೂಪ್ ಸೇರಿಕೊಳ್ಳಿ. Join