ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಯವರು ತಮ್ಮ 111 ವರ್ಷಗಳ ಯತಿ ಜೀವನವನ್ನು ಕೊನೆಗೊಳಿಸಿ ಇಂದು ಲಿಂಗೈಕ್ಯರಾಗಿದ್ದಾರೆ.

ಅನೇಕ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಇಂದು ಬೆಳಿಗ್ಗೆ 11.44 ರ ಸುಮಾರಿಗೆ ಶಿವೈಕ್ಯರಾಗಿದ್ದಾರೆ. ಇವರು ಜಾತಿ ಬೇದವನ್ನು ಎಣಿಸದೆ ಎಲ್ಲ ಧರ್ಮದ ಮಕ್ಕಳಿಗೆ ಆಹಾರ, ವಸತಿ ಮತ್ತು ಶಿಕ್ಷಣವನ್ನು ಪೂರೈಸಿ ಅಪಾರ ಸಮಾಜ ಸೇವೆಯನ್ನು ಸಲ್ಲಿಸಿದ್ದಾರೆ. ಈವರ ಈ ಸಾಧನೆಗೆ ಕರ್ನಾಟಕ ರತ್ನ, ಪದ್ಮ ಭೂಷಣ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.

ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳವರ ಕ್ರಿಯಾ ಸಮಾದಿ ಕಾರ್ಯವು ನಾಳೆ ಅಂದರೆ ಮಂಗಳವಾರ 4.30 ರ ಸುಮಾರಿಗೆ ನಡೆಯಲಿದೆ. ಇಂದು ಮತ್ತು ನಾಳೆ 3.00 ಗಂಟೆಗಳ ವರೆಗೆ ಬಕ್ತಾದಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ಶ್ರೀಗಳ ಅಂತಿಮ ದರ್ಶನ ಪಡೆಯಲು ತೆರಳುವವರಿಗೆ ವಿಶೇಷ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಿಳಿಸಿದ್ದಾರೆ.

ಇದನ್ನೂ ಓದಿರಿ : ನಡೆದಾಡುವ ದೇವರು ಈ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು..!

Image Copyright : google.com

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here