Mangaluru Blast: ಬಾಂಬ್ ತಯಾರಿಸುತ್ತಿರುವ ವಿಡಿಯೋಗಳನ್ನು ಐಸಿಸ್ ಸಹಚರರೊಂದಿಗೆ ಹಂಚಿಕೊಂಡಿದ್ದ ಶಾರಿಕ್!

Mangaluru Blast । shariq-had-shared-videos-on-bomb-making-with-aides

ಶಿವಮೊಗ್ಗ: ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಇಟ್ಟು ಬ್ಲಾಸ್ಟ್‌ ಮಾಡಿದ ಪ್ರಕರಣಕ್ಕೆ (Mangaluru Blast) ಸಂಬಂಧಿಸಿದಂತೆ ಶಂಕಿತ ಉಗ್ರ ಶಾರಿಕ್‌ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರೇಮ್ ಸಿಂಗ್ ಎಂಬಾತನಿಗೆ ಚೂರಿ ಇರಿದ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಪ್ರಮುಖ ಆರೋಪಿ ಜಬೀವುಲ್ಲಾ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು. ಈ ಪ್ರಕರಣ ತನಿಖೆ ವೇಳೆ ಶಾರಿಕ್‌ಗೆ ಮಾಜ್ ಮುನೀರ್ ಮತ್ತು ಸಯ್ಯದ್ ಯಾಸೀನ್ ಎಂಬ ಇಬ್ಬರು ಸಹಚರರು ಇರುವ ಮಾಹಿತಿ ಹೊರಬಂದಿತ್ತು. ಇದಲ್ಲದೇ ಶಾರಿಕ್ ಮತ್ತು ಮಾಜ್ 2020 ರಲ್ಲಿ ಮಂಗಳೂರಿನ ಗೋಡೆ ಮೇಲೆ ಜಿಹಾದಿ ಬರಹಗಳನ್ನು ಬರೆದ ಪ್ರಕರಣದಲ್ಲಿ ಭಾಗಿಯಾಗಿದ್ದರು. ಇದಲ್ಲದೇ ಜಿಹಾದಿ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದ ಇವರು ಶಿವಮೊಗ್ಗದಲ್ಲಿ ರಾಷ್ಟ್ರದ್ವಜವನ್ನು ಸಹ ಸುಟ್ಟಿದ್ದರು. ಈ ಪ್ರಕರಣ ಸಹ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿತ್ತು.

ಇದನ್ನೂ ಓದಿರಿ: ಶ್ರದ್ಧಾ ಕೊಲೆ ಮಾದರಿಯಲ್ಲೇ ಮತ್ತೊಂದು ಪ್ರಕರಣ: ಯುಪಿ ಪೊಲೀಸರಿಂದ ಆರೋಪಿಗೆ ಗುಂಡೇಟು..!

ಒಟ್ಟಾರೆ ಪ್ರಕರಣಗಳ ತನಿಖೆಯನ್ನು ಕೈಗೊಂಡ ಪೊಲೀಸರಿಗೆ, ಟೆಲಿಗ್ರಾಮ್, ಸಿಗ್ನಲ್, ಇನ್‌ಸ್ಟಾಗ್ರಾಮ್, ವೈರ್, ಎಲಿಮೆಂಟ್ ಮುಂತಾದ ಮೆಸೆಂಜರ್ ಆ್ಯಪ್‌ಗಳ ಮೂಲಕ ಶಾರಿಕ್ ಉಗ್ರವಾದ, ಮೂಲಭೂತವಾದ, ಐಸಿಸ್ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ಕೆಲಸಗಳಿಗೆ ಸಂಬಂಧಿಸಿದ ಪಿಡಿಎಫ್ ಫೈಲ್‌ಗಳು, ವಿಡಿಯೋ ಮತ್ತು ಆಡಿಯೋ ಮತ್ತು ಲಿಂಕ್‌ಗಳನ್ನು ತನ್ನ ಸಹಚರರ ಜೊತೆಯಲ್ಲಿ ಹಂಚಿಕೊಳ್ಳುತಿದ್ದ ಎಂಬ ಮಾಹಿತಿ ದೊರೆತಿದೆ.

ಬಾಂಬ್ ತಯಾರಿಸುವ ಮಾಹಿತಿಯಿರುವ ಪಿಡಿಫ್ ಮತ್ತು ವಿಡಿಯೋಗಳನ್ನು ಶಾರಿಕ್ ನಿಂದ ಪಡೆದ ನಂತರ ಇಬ್ಬರು ಆರೋಪಿಗಳು ಅಗತ್ಯ ಸಾಮಗ್ರಿಗಳನ್ನು ಶಿವಮೊಗ್ಗ ಮಾರುಕಟ್ಟೆ ಮತ್ತು ಇ-ಕಾಮರ್ಸ್ ಸೈಟುಗಳ ಮೂಲಕ ಖರೀದಿ ಮಾಡಿದ್ದರು. ಇದಲ್ಲದೇ ಬಾಂಬ್ ತಯಾರಿಕೆಗೆ ಬೇಕಾದ ಹಣಕಾಸಿನ ನೆರವು ಕ್ರಿಪ್ಟೋಕರೆನ್ಸಿ ಮೂಲಕ ಲಭ್ಯವಾಗಿತ್ತು.

ಇದನ್ನೂ ಓದಿರಿ: ಮದುವೆ ಸುದ್ದಿ ವೈರಲ್ ಆಗ್ತಿದ್ದಂತೆ ಗಂಡಿನ ಫೋಟೊ ಶೇರ್ ಮಾಡಿದ ತಮನ್ನಾ

LEAVE A REPLY

Please enter your comment!
Please enter your name here