ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಾಗರಾಜ್ ನಿನ್ನೆ ರಾತ್ರಿ 10.30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಹಲವು ಚಿತ್ರಗಳಿಗೆ ವಸ್ತ್ರವಿನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದ ಖ್ಯಾತಿ ಇವರದು.
ವಸ್ತ್ರಾಲಂಕಾರ ಕಲಾವಿದರಾದ ಇವರು, ಸರ್ವರ್ ಸೋಮಣ್ಣ, ಬಂಡ ನನ್ನ ಗಂಡ, ಕೋಟಿಗೊಬ್ಬ-3 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರ ಆಪ್ತ ವಸ್ತ್ರಾಲಂಕಾರ ಕಲಾವಿದ ಇವರಾಗಿದ್ದರು. ಸುಮಾರು 40 ವರ್ಷಗಳ ಕಾಲ ಕನ್ನಡ ಚಿತ್ರರಂಗದ ಕಲಾ ಸೇವೆ ಮಾಡಿದ ಇವರು ಕಳೆದ 5 ತಿಂಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕಳೆದ 4 ದಿನಗಳಿಂದ ದೇವೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದನ್ನೂ ಓದಿರಿ: Abhishek Ambareesh Engagement: ಶುಭಕೋರಿದ ಯಶ್ ಮತ್ತು ದರ್ಶನ