ಜುಲೈ 20 ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಫಲಿತಾಂಶ ನೋಡುವುದು ಹೇಗೆ ? ಇಲ್ಲಿದೆ ಮಾಹಿತಿ

secondary-puc-result-published-on-july-20

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ 2020-21 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಇದೇ ಜುಲೈ 20 ರಂದು ಪ್ರಕಟಿಸಲಿದೆ. ದ್ವಿತೀಯ ಪಿಯುಸಿ ವಿದ್ಯರ್ಥಿಗಳು ಪ್ರತಿವರ್ಷದಂತೆ ಈ ಬಾರಿಯೂ ಅಂಕ ಆಧಾರಿತ ಫಲಿತಾಂಶವನ್ನು ವೆಬ್ ಸೈಟ್ ನಲ್ಲಿ ನೋಡಬಹುದಾಗಿದೆ.

ಈ ಬಾರಿ ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಪರೀಕ್ಷೆಗಳು ರದ್ದಾಗಿವೆ. ಆದರೆ ಪದವಿ ಪೂರ್ವ ಶಿಕ್ಷಣ ಇಲಾಖೆ ಹಲವು ಮಾನದಂಡವನ್ನು ಇಟ್ಟುಕೊಂಡು ಫಲಿತಾಂಶವನ್ನು ನೀಡಲು ಮುಂದಾಗಿದೆ. 2020-21 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ 20 ರಂದು ಬಿಡುಗಡೆಯಾಗಲಿದ್ದು, ವೆಬ್ ಸೈಟ್ ನಲ್ಲಿ ನೋಡಿಕೊಳ್ಳಬಹುದು.

ಇದನ್ನೂ ಓದಿರಿ: ಭಾರತೀಯ ಸ್ಟೇಟ್ ಬ್ಯಾಂಕ್ ನೇಮಕಾತಿ 2021 / SBI recruitment 2021 – Apply Online for 6100 Apprentice

ಈ ಬಾರಿ ಪರೀಕ್ಷೆಯನ್ನು ನಡೆಸದ ಕಾರಣ ವಿದ್ಯಾರ್ಥಿಗಳ ಬಳಿಯಲ್ಲಿ ಪ್ರತ್ಯೇಕವಾದ ನೋಂದಣಿ ಸಂಖ್ಯೆ ಇರುವುದಿಲ್ಲ. ಈ ಕಾರಣದಿಂದಾಗಿ ಇಲಾಖೆಯು ಪ್ರತ್ಯೇಕವಾದ ನೋಂದಣಿ ಸಂಖ್ಯೆಗಳನ್ನು ಸೃಷ್ಟಿಸಿದ್ದು, ಇದನ್ನು ಇಲಾಖಾ ವೆಬ್ ಸೈಟ್ ಮೂಲಕವೇ ಪಡೆದುಕೊಳ್ಳಬಹುದಾಗಿದೆ. ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳಲು ಇಂದಿನಿಂದಲೇ ಅವಕಾಶ ಮಾಡಿಕೊಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳಲು ಇಲಾಖೆಯ ವೆಬ್ ಸೈಟ್ pue.kar.nic.in ಗೆ ಭೇಟಿ ನೀಡಿ, ಅಲ್ಲಿ know my registration number ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ಅದರ ಮೂಲಕ ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here