ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೊರವನಹಳ್ಳಿಯ ಒಂದು ಕುಟುಂಬ, ಗರ್ಭಿಣಿ ಹೆಂಗಸನ್ನು ಸ್ಕ್ಯಾನಿಂಗ್ ಮಾಡಿಸಲು ಸ್ಕ್ಯಾನಿಂಗ್ ಸೆಂಟರ್ ಒಂದಕ್ಕೆ ಕರೆದುಕೊಂಡು ಹೋಗಿದ್ದರು. ಅಂದು ಸ್ಕಾನಿಂಗ್ ಮಾಡಿದ ಅವರು ಮಗುವಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.
ಅಂದು ಸ್ಕಾನಿಂಗ್ ಸೆಂಟರ್ ಮಾಡಿದ ಎಡವಟ್ಟಿನಿಂದ ಆ ಕುಟುಂಬ ಇಂದು ಪರಿತಪಿಸುತ್ತಿದೆ. ಕಾರಣ ಏನೆಂದರೆ ಅಂದು ಯಾವುದೇ ಕಾಯುಲೆಯಿಲ್ಲ ಎಂದು ಸ್ಕಾನಿಂಗ್ ಸೆಂಟರ್ ಹೇಳಿತ್ತು, ಆದರೆ ಮಗು ಜನಿಸಿದ ಬಳಿಕ ಡೌನ್ ಸಿಂಡ್ರೋಮ್ ಎಂಬ ಕಾಯಿಲೆ ಇರುವುದು ಕಂಡು ಬಂದಿತು.
ಇದನ್ನೂ ಓದಿರಿ: SSLC Exam 2023: ಪರೀಕ್ಷೆ’ಯ ‘ಅಂತಿಮ ವೇಳಾಪಟ್ಟಿ’ ಪ್ರಕಟ, ಇಲ್ಲಿದೆ ವೇಳಾಪಟ್ಟಿ
ಮಗುವನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ ಕೇವಲ ಡೌನ್ ಸಿಂಡ್ರೋಮ್ ಮಾತ್ರವಲ್ಲದೆ ಹೃದಯದಲ್ಲಿ ಮೂರು ಹೋಲ್ ಇರೋದು ತಿಳಿದು ಬಂದಿದೆ ಎನ್ನುತ್ತಾರೆ ಮಗುವಿನ ತಾಯಿ. ತಪ್ಪಾದ ಸ್ಕಾನಿಂಗ್ ವರದಿ ನೀಡಿದ ಸೆಂಟರ್ ವಿರುದ್ಧ ಮಗುವಿನ ಪೋಷಕರಾದ ಮಹೇಶ್ ಹಾಗೂ ಸಿಂಧುಶ್ರಿ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ವಿಚಾರಣೆಯನ್ನು ನಡೆಸಿದ ಗ್ರಾಹಕ ನ್ಯಾಯಾಲಯ ಡಿ2 ಡಯಾಗ್ನೆಟಿಕ್ ಸೆಂಟರ್ ಗೆ 15 ಲಕ್ಷ ರೂಪಾಯಿ ದಂಡವನ್ನ ವಿಧಿಸಿ ಆದೇಶವನ್ನ ಹೊರಡಿಸಿದೆ. ಸದ್ಯ, ಮಾಡಿದ ಯಡವಟ್ಟಿಗೆ ಈಗ ಡಯಾಗ್ನೆಟಿಕ್ ಸೆಂಟರ್ ದಂಡ ತೆರುವಂತಾಗಿದೆ. ಆದರೆ ಡಯಾಗ್ನೆಟಿಕ್ ಸೆಂಟರ್ ಮಾಡಿದ ತಪ್ಪಿಗೆ ಇಡೀ ಕುಟುಂಬ ಸಂಕಷ್ಟದಲ್ಲಿ ಕೈ ತೊಳೆಯುವಂತಾದದ್ದು ಮಾತ್ರ ಸುಳ್ಳಲ್ಲ.
ಇದನ್ನೂ ಓದಿರಿ: ಕಲಬುರಗಿಗೆ ಮಲ್ಲಿಕಾರ್ಜುನ ಖರ್ಗೆ: ಭರ್ಜರಿ ಸ್ವಾಗತಕ್ಕೆ ಕಾಂಗ್ರೆಸ್ ಸಿದ್ಧತೆ !