ಭಾರತದ ಮೊದಲ ಗೃಹ ಸಚಿವ, ಉಕ್ಕಿನ ಮನಿಷ್ಯ ಎಂದೇ ಪ್ರಖ್ಯಾತಿ ಪಡೆದಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವಾದ ಅಕ್ಟೋಬರ್ 31 ರಂದು ವಿಶ್ವದ ಅತೀ ಎತ್ತರವಾದ ಏಕತಾ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ.
ಅಕ್ಟೋಬರ್ 31, 1875 ರಂದು ಗುಜರಾತಿನ ನಡಿಯಾದ ಎಂಬಲ್ಲಿ ಜನಿಸಿದ ಅವರು ಚಿಕ್ಕಂದಿನಿಂದಲೂ ಹೋರಾಟದ ಪ್ರವ್ರತ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ನಂತರ ಕಾಂಗ್ರೇಸಿನ ಹಿರಿಯ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಹೊರಹೊಮ್ಮಿದರು. ಸ್ವಾತಂತ್ರ್ಯಾ ನಂತರ ದೇಶದ ಮೊದಲ ಉಪ ಪ್ರಧಾನಿ ಮತ್ತು ಗೃಹ ಸಚಿವರಾಗಿ ಇಡೀ ದೇಶವನ್ನೇ ಒಗ್ಗೂಡಿಸಿದರು. ಈ ಮಹಾನ್ ನಾಯಕನ ಚಿಂತನೆ, ದ್ಯೇಯ ಮತ್ತು ಸಾಧನೆಯನ್ನು ಅಜರಾಮರಗೊಳಿಸಲು ನರೇಂದ್ರ ಮೋದಿಯವರ ಸರಕಾರ ಈ ಪ್ರತಿಮೆಯನ್ನು ಗುಜರಾತಿನ ನರ್ಮದಾ ನದಿಯ ಮದ್ಯದಲ್ಲಿ ನಿರ್ಮಿಸಿ ಲೋಕಾರ್ಪಣೆ ಮಾಡಲು ಹೊರಟಿದೆ.
ಇದನ್ನೂ ಓದಿರಿ : ಮೋದಿ ಆಡಳಿತವನ್ನು ಹೊಗಳಿದ ಐಎಂಎಫ್ ..!
ವಿಶ್ವದ ಅತೀ ಎತ್ತರದ ಪ್ರತಿಮೆ
ನರ್ಮದಾ ನದಿಗೆ ಕಟ್ಟಲಾಗಿರುವ ಸರ್ದಾರ್ ಸರೋವರ ಅಣೆಕಟ್ಟೆಯಿಂದ ಕೆಳಗೆ 3.2 ಕಿ.ಮೀ. ದೂರದಲ್ಲಿರುವ ಸಾಧು ಬೆಟ್ಟದ ಅಂಚಿನಲ್ಲಿರುವ ಸರ್ದಾರ್ ಸರೋವರದಲ್ಲಿ ತಲೆ ಎತ್ತಿ ನಿಂತಿರುವ ಪಟೇಲರ ಪ್ರತಿಮೆ ಬರೋಬ್ಬರಿ 182 ಮೀ. ಎತ್ತರವಿದೆ. ಸದ್ಯ ವಿಶ್ವದ ಅತೀ ಎತ್ತರದ (128 ಮೀ.) ಬುದ್ಧನ (ಚೀನಾದ ವಾಶಾನ್ ) ಪ್ರತಿಮೆಗಿಂತ 54 ಮೀ. ಅಧಿಕ ಎತ್ತರವಿದ್ದು, ಅನಾವರಣದ ನಂತರ ಇದೇ ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಖ್ಯಾತಿಯನ್ನು ಪಡೆಯಲಿದೆ.
Sardar Vallabhbhai Patel statueಇದು ಕೇವಲ ಪ್ರತಿಮೆಯಾಗಿರದೆ ಪ್ರವಾಸೋದ್ಯಮ ದೃಷ್ಟಿಯಿಂದಲೂ ಅಭಿವೃದ್ಧಿಪಡಿಸಲಾಗಿದೆ. ಪ್ರತಿಮೆಯ ಒಳಗೆ ಹೋಗಿ 153 ಮೀ. ಎತ್ತರದಲ್ಲಿ ನಿಂತು ಸುತ್ತಲಿನ ಸೊಬಗನ್ನು ನೋಡಬಹುದಾಗಿದೆ. ಇಲ್ಲಿಗೆ ಪ್ರತಿನಿತ್ಯ ಅನೇಕ ಸಂಖ್ಯೆಯಲ್ಲಿ ವೀಕ್ಷಣೆಗೆ ಬರುವ ನಿರೀಕ್ಷೆಯೂ ಇದೆ. ಸರೋವರದಲ್ಲಿ ಬೋಟಿಂಗ್ ವ್ಯವಸ್ಥೆ ಸೇರಿದಂತೆ ಪ್ರವಾಸೋದ್ಯಮಕ್ಕೆ ಅವಶ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಲಾಗಿದೆ.
ರೈತರಿಂದ ಪಡೆದ ಕಬ್ಬಿಣದ ಬಳಕೆ
ಲೋಹ ಚಳುವಳಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ರೈತರಿಂದ ಕಬ್ಬಿಣವನ್ನು 2013 -14 ರಲ್ಲಿ ಸಂಗ್ರಹಿಸಿ ಅವುಗಳನ್ನು ಅಡಿಪಾಯಕ್ಕೆ ಸೇರಿದಂತೆ ಪ್ರತಿಮೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಸರ್ದಾರರ ಪ್ರತಿಮೆ ನಿರ್ಮಾಣಕ್ಕಾಗಿ ಮೂಲೆ ಮೂಲೆಯಿಂದ ರೈತರು ಕಬ್ಬಿಣವನ್ನು ಕಳುಹಿಸಿಕೊಟ್ಟಿದ್ದರು.
ಅಕ್ಟೋಬರ್ 31 ರಾಷ್ಟ್ರೀಯ ಏಕತಾ ದಿನದಂದು ನಡೆಯಲಿರುವ ಬೃಹತ್ ಸಮಾರಂಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪಟೇಲರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.