ಬೆಂಗಳೂರು: ಅನೈತಿಕ ವ್ಯವಹಾರ ಮತ್ತು ಅತ್ಯಾಚಾರ ಪ್ರಕರಣದ ಆರೋಪಿ ಸ್ಯಾಂಟ್ರೋ ರವಿಯನ್ನು ಗುಜರಾತಿನ ಅಹಮದಾಬಾದ್ ನಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜನವರಿ 1 ರಂದು ಮೈಸೂರಿನಲ್ಲಿ ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ, ರಾಜ್ಯದ ಹಲವೆಡೆ ಕಾರಿನಲ್ಲಿ ಸುತ್ತಾಡಿದ್ದ, ನಂತರ ಗುಜರಾತ್ ಗೆ ತೆರಳಿ ವೇಷ ಬದಲಿಸಿಕೊಂಡಿದ್ದ. ನಿತ್ಯ ಜಾಗ ಹಾಗೂ ಮೊಬೈಲ್ ಸೀಮ್ ಬದಲಾಯಿಸುತ್ತಿದ್ದರಿಂದ ಆತನ ಬಂಧನ ವಿಳಂಬವಾಗಿತ್ತು. ಆತನ ಬಂಧನಕ್ಕಾಗಿ ಮಂಡ್ಯ, ಮೈಸೂರು, ರಾಮನಗರ ಎಸ್ ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಗುಜರಾತ್ ಪೊಲೀಸರ ನೆರವಿನಿಂದ ಇಂದು ಮಧ್ಯಾಹ್ನ ಆರೋಪಿಯನ್ನು ಬಂಧಿಸಿದೆ ಎಂದು ಎಡಿಜಿಪಿ ವಿವರಿಸಿದರು.
ಇದನ್ನೂ ಓದಿರಿ: ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ
ಇಂದು ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಹಾಗೂ ಅವನ ಜೊತೆ ಮೂವರನ್ನು ಬಂಧಿಸಲಾಗಿದೆ. ಸ್ಯಾಂಟ್ರೋ ರವಿ ಜೊತೆಗೆ ರಾಮ್ ಜಿ, ಸತೀಶ್, ಮಧುಸೂದನ್ ಎಂದು ಗುರುತಿಸಲಾಗಿದೆ. ನಿನ್ನೆ ದಿನ ಮಂತ್ರಾಲಯದಲ್ಲಿ ಸ್ಯಾಂಟ್ರೋ ರವಿ ಆಪ್ತನನ್ನು ಬಂಧಿಸಲಾಗಿತ್ತು. ನಂತರ ದೊರೆತ ಖಚಿತ ಮಾಹಿತಿ ಮೇರೆಗೆ ಗುಜರಾತ್ ಗೆ ತೆರಳಿದ ವಿಶೇಷ ತಂಡದಿಂದ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿದೆ. ಟ್ರಾನ್ಸಿಟ್ ವಾರೆಂಟ್ ಪಡೆದು ಮೈಸೂರಿಗೆ ಕರೆತರುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿರಿ: ವಿಶ್ವದ ಅತೀ ಉದ್ದದ ರಿವರ್ ಕ್ರೂಸ್ ‘ಗಂಗಾ ವಿಲಾಸ್’ ಗೆ ಪ್ರಧಾನಿ ಮೋದಿ ಚಾಲನೆ