sanitise-covid-virus-survives-on-skin-for-9-hrs

ಕೊರೋನಾ ವೈರಸ್ ಜಗತ್ತಿನಲ್ಲಿ ಇನ್ನಿಲ್ಲದಂತಹ ಸಮಸ್ಯೆಗಳನ್ನು ತಂದೊಡ್ಡಿದ್ದು, ಈ ವೈರಸ್ ನಿಯಂತ್ರಿಸುವ ಕುರಿತು ಹಲವಾರು ಸಂಶೋಧನೆಗಳು ನಡೆಯುತ್ತಲೇ ಇದೆ. ಇದೀಗ ನಮ್ಮನ್ನು ಬೆಚ್ಚಿಬೀಳಿಸುವ ಮಾಹಿತಿಯೊಂದು ಹೊರಬಂದಿದ್ದು, ನಾವೆಲ್ಲಾ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳದೆ ಹೋದಲ್ಲಿ ಸಂಕಷ್ಟಕ್ಕೆ ಗುರುಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಜಪಾನ್ ನ ಕ್ಯೋಟೋ ಫ್ರಿಪೆಕ್ಟರಲ್ ಯೂನಿರ್ವಸಿಟಿ ಆಫ್ ಮೆಡಿಸನ್ ಸಂಶೋಧಕರು ಸಂಶೋಧನೆಯೊಂದನ್ನು ಮಾಡಿದ್ದು, ಕೊರೋನಾ ವೈರಸ್ ನಮ್ಮ ಚರ್ಮದ ಮೇಲೆ ಅಂಟಿಕೊಂಡರೆ ಹಲವು ಗಂಟೆಗಳ ಕಾಲ ಬದುಕಿ ಇರಬಲ್ಲವು ಎಂಬುದನ್ನು ಕಂಡುಕೊಂಡಿದ್ದಾರೆ. ಈ ವೈರಸ್ ಅಧಿಕ ಶಕ್ತಿಯನ್ನು ಹೊಂದಿದ್ದು, ಸುಮಾರು 9 ಗಂಟೆಗಳ ವರೆಗೆ ಜೀವಂತವಾಗಿ ನಮ್ಮ ಚರ್ಮಕ್ಕೆ ಅಂಟಿಕೊಂಡಿರಬಲ್ಲವು.

ಇದನ್ನೂ ಓದಿರಿ: ಆಯುರ್ವೇದ ಈ ಕಷಾಯ ಶೀತ ಕೆಮ್ಮು ಜ್ವರಕ್ಕೆ ರಾಮಬಾಣ..!

ಇವರ ಸಂಶೋಧನೆಯ ಪ್ರಕಾರ ಇಂಪ್ಲ್ಯೂಯೆಂಜಾ ಉಂಟುಮಾಡುವ ವೈರಸ್ ನಮ್ಮ ಚರ್ಮದ ಮೇಲೆ ಕೇವಲ 2 ಗಂಟೆಗಳು ಮಾತ್ರ ಉಳಿಯಬಲ್ಲವಾಗಿವೆ. ಆದರೆ ಕೊರೋನಾಗೆ ಕಾರಣವಾದ SARS-CoV-2 ವೈರಸ್ ಗಳು ಅವುಗಳಿಗಿಂತಲೂ ಭಲಶಾಲಿಯಾಗಿದ್ದು, 9 ಗಂಟೆಗಳ ಕಾಲ ಬದುಕಬಲ್ಲದು ಎಂದು ಕಂಡುಕೊಂಡರು.

ಕೊರೋನಾ ವೈರಸ್ ನಾಶಮಾಡಲು ಸತತವಾಗಿ ಸೆನಿಟೈಸರ್ ಅಥವಾ ಸಾಬೂನಿನಿಂದ ಕೈಗಳನ್ನು ತೋಳ್ದುಕೊಳ್ಳುವುದು ಮತ್ತು ಹೊರಗೆ ಹೋಗಿಬಂದ ನಂತರ ಸ್ನಾನ ಮಾಡುವುದರಿಂದ ನಾಶ ಮಾಡಬಹುದಾಗಿದೆ. ಈ ಸಂಶೋಧಕರು ಸೆನಿಟೈಸರ್ ಮತ್ತು ಸಾಬೂನು ಬಳಸಿ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದನ್ನು ಒತ್ತಿ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿರಿ: ಸೊಳ್ಳೆಗಳಿಂದ ಕೊರೊನಾ ವೈರಸ್ ಸೋಂಕು ಹರಡುತ್ತದೆಯೇ ? ತಜ್ಞರು ಹೇಳೋದೇನು ?

LEAVE A REPLY

Please enter your comment!
Please enter your name here