sandalwood-senior-actress-b-shantamma-passes-away

ಮೈಸೂರು: ಚಿನ್ನಾರಿ ಮುತ್ತ, ಕಂಸಾಳೆ ಕೈಸಾಲೆ, ಚಂದವಳ್ಳಿ ತೋಟ, ಪಾತರಗಿತ್ತಿ ಸೇರಿದಂತೆ 250 ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟಿ ಬಿ. ಶಾಂತಮ್ಮ (94) ಇಂದು ವಿಧಿವಶರಾಗಿದ್ದಾರೆ.

ಶಾಂತಮ್ಮ ಅವರು ಕಳೆದ ಕೆಲವು ದಿನಗಳಿಂದ ಮೈಸೂರಿನ ತಮ್ಮ ಮಗಳ ಮನೆಯಲ್ಲಿ ವಾಸವಿದ್ದರು. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೂ ಇಂದು ಸಂಜೆ ಸುಮಾರು 5.45 ನಿಮಿಷಗಳ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಡಾ. ರಾಜ್ ಕುಮಾರ್ ಸೇರಿದಂತೆ ಹಲವು ಖ್ಯಾತ ನಟರ ಜೊತೆಯಲ್ಲಿ ನಟಿಸಿದ್ದ ಇವರು ಕನ್ನಡ, ಹಿಂದಿ, ತಮಿಳು ಭಾಷೆಯ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಇವರ ಸಾವಿನಿಂದ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ.

LEAVE A REPLY

Please enter your comment!
Please enter your name here