ಬೆಂಗಳೂರು: ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸುರೇಶ್ ಚಂದ್ರ (69) ಇಂದು ಅಪೋಲೋ ಆಸ್ಪತ್ರೆಯಲ್ಲಿ ಕೊನೆಯಿಸಿರೆಳೆದಿದ್ದಾರೆ. ಕುರಿತು ಅವರ ಪುತ್ರ ವಿನಯ್ ಚಂದ್ರ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ನೆಲೆಸಿದ್ದ ಸುರೇಶ್ ಚಂದ್ರ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ, ಮೃತರ ಅಂತ್ಯಕ್ರಿಯೆ ತುಮಕೂರಿನ ಮಧುಗಿರಿಯ ಲಿಂಗೇನಹಳ್ಳಿಯಲ್ಲಿ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ಗೋಲ್ಡನ್ ಸ್ಟಾರ್ ಗನೇಶ್ ಅಭಿನಯದ “ಚೆಲುವಿನ ಚಿತ್ತಾರ” ಸಿನಿಮಾದಿಂದ ಪ್ರಸಿದ್ದವಾಗಿದ್ದ ಸುರೇಶ್ ಚಂದ್ರ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು 80 ರ ದಶಕದಿಂದ ಸಿನಿ ಪತ್ರಿಕೋದ್ಯಮದಲ್ಲಿ ಕೆಲಸವನ್ನು ಮಾಡಿಕೊಂಡು ಬಂದಿದ್ದರು.
ಇದನ್ನೂ ಓದಿರಿ: ರಕ್ಷಿತ್ ಶೆಟ್ಟಿ ಬರ್ತಡೇಗೆ ಬಂತು ‘777 ಚಾರ್ಲಿ’ ಟೀಸರ್