Abhishek Ambareesh Engagement: ಶುಭಕೋರಿದ ಯಶ್ ಮತ್ತು ದರ್ಶನ

ಕನ್ನಡ ಚಿತ್ರರಂಗದಲ್ಲಿ ಒಬ್ಬರ ನಂತರ ಒಬ್ಬರು ಎಂಗೇಜ್ ಮೆಂಟ್ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ವಶಿಷ್ಠ ಸಿಂಹ ಮತ್ತು ಹರಿಪ್ರಿಯಾ ಉಂಗುರ ಬದಲಿಸಿಕೊಂಡಿದ್ದರು. ಇದೀಗ ಅಭಿಷೇಕ್ ಅಂಬರೀಷ್ ಮತ್ತು ಅವೀವಾ (Abhishek Ambareesh Engagement) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಫೋರ್ ಸೀಸನ್ಸ್ ಎಂಬ ಹೊಟೇಲ್‌ನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ (ಡಿಸೆಂಬರ್ 11) ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಸದಸ್ಯರು, ಬಂದು ಬಳಗದವರು, ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಸೇರಿದಂತೆ ಹಲವರು ಭಾಗಿಯಾಗಿದ್ದರು.

sandalwood-actor-abhishek-ambareesh-and-model-aviva-bidapa-engagement-pics

ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ಎಂಗೇಜ್ ಮೆಂಟ್ ಕಾರ್ಯಕ್ರಮಕ್ಕೆ ಕೆಲವರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಇಂದು ದರ್ಶನ, ಯಶ್ ಮತ್ತು ರಾಧಿಕಾ ಭಾಗಿಯಾಗಿದ್ದರು. ಇವರಲ್ಲದೇ ರಾಜಕೀಯ ನಾಯಕರಾದ ಅಶ್ವತ್ ನಾರಾಯಣ್, ಆರ್ ಅಶೋಕ್, ಸುಧಾಕರ್ ಭಾಗಿಯಾಗಿ ಶುಭ ಕೋರಿದರು.

abhishek-ambareesh-aviva-bidapa-engagement-gossip-photos

ಅವಿವಾ ಸಿನಿಮಾ ಲೋಕದ ಹುಡುಗಿಯಲ್ಲದಿದ್ದರೂ ಪ್ರಸಿದ್ಧ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರು ಪುತ್ರಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅಲ್ಲದೇ ಇವರದೇ ಹೆಸರಿನ ಅವೀವಾ ಬ್ರಾಂಡ್ ನ ಒಡತಿಯೂ ಆಗಿದ್ದಾರೆ.

ಇದನ್ನೂ ನೋಡಿರಿ: ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ, ತಾಂಬೂಲ ಬದಲಿಸಿಕೊಂಡ ಕುಟುಂಬ ?

sandalwood-actor-abhishek-ambareesh-and-model-aviva-bidapa-engagement-pics

ಮೊದಲಿಗೆ ಅಭಿಷೇಕ್ ಅಂಬರೀಷ್ ನಿಶ್ಚಿತಾರ್ಥದ ಕುರಿತಾಗಿ ಗೌಪ್ಯತೆಯನ್ನು ಕಾಯ್ದುಕೊಂಡಿದ್ದರು. ನಂತರ ಮಾಧ್ಯಮಗಳಿಗೆ ವಿಷಯ ಸೋರಿಕೆಯಾದ ನಂತರವೂ ಸುಮಲತಾ ಅವರು ಇದುವರೆಗೂ ಯಾವುದೇ ನಿರ್ಧಾರವಾಗಿಲ್ಲ, ಯಾರಾದರೂ ಹುಡುಗಿಯಿದ್ದರೆ ನೀವೆ  ಹೇಳಿ ಎಂದು ಹೇಳಿದ್ದರು.

abhishek-ambareesh-aviva-bidapa-engagement-gossip-photos

ಸದ್ಯ ಕುಟುಂಬಸ್ಥರು ಹಾಗೂ ಆಪ್ತರ ನಡುವೆ ನಡೆದ ಸಮಾರಂಭದಲ್ಲಿ ಅಭಿಷೇಕ್ ತಮ್ಮ ಬಾಲ್ಯದ ಸ್ನೇಹಿತೆ ಅವಿವಾ ಅವರಿಗೆ ಉಂಗುರ ತೊಡಿಸಿದ್ದು, ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿರಿ: ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ, ತಾಂಬೂಲ ಬದಲಿಸಿಕೊಂಡ ಕುಟುಂಬ ?

LEAVE A REPLY

Please enter your comment!
Please enter your name here