ಅಮೂಲ್ಯ ಅವಳಿ ಮಕ್ಕಳ ಹಾರೈಸಿದ ವೃಕ್ಷಮಾತೆ ತಿಮ್ಮಕ್ಕ

saalumarada-thimmakka-meet-to-actor-amulya-twin-children

ಸ್ಯಾಂಡಲ್ ವುಡ್ ಗೋಲ್ಡನ್ ಕ್ವೀನ್ ಎಂದೇ ಪ್ರಸಿದ್ಧರಾದ ನಟಿ ಅಮೂಲ್ಯ ತಾಯಿಯಾಗಿದ್ದು, ಸದ್ಯ ಸಿನಿಮಾ ರಂಗದಿಂದ ಸ್ವಲ್ಪ ದೂರವಿದ್ದಾರೆ. ತಮ್ಮ ಅವಳಿ ಮಕ್ಕಳ ಪೋಷಣೆಯಲ್ಲಿ ಬ್ಯುಸಿ ಆಗಿರುವ ಅಮೂಲ್ಯ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿದ್ದಾರೆ.

ಈ ನಡುವೆ ಶತಾಯಿಷಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅಮೂಲ್ಯ ಮನೆಗೆ ಭೇಟಿ ನೀಡಿ ಅವಳಿ ಮಕ್ಕಳಿಗೆ ಶುಭ ಹಾರೈಸಿದ್ದಾರೆ. ಮುದ್ದಾದ ಮಕ್ಕಳ ಜೊತೆಯಲ್ಲಿ ಕೆಲ ಸಮಯ ಕಳೆದ ತಿಮ್ಮಕ್ಕ ಅವರು, ಮಕ್ಕಳಿಗೆ ಶುಭವಾಗಲಿ ಎಂದು ಹರಸಿದ್ದಾರೆ.

ಇದನ್ನೂ ಓದಿರಿ: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ಹುಟ್ಟುಹಬ್ಬದ ಸಂಭ್ರಮ !

saalumarada-thimmakka-meet-to-actor-amulya-twin-children

ಈ ಕುರಿತಂತೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಅಮೂಲ್ಯ ಪತಿ ಜಗದೀಶ್, ‘ಪದ್ಮಶ್ರೀ ಪ್ರಶಸ್ತಿ ವಿಜೇತೆ, ಸಾವಿರಾರು ಮರಗಳ ಪೋಷಿಸಿದ ಶತಾಯುಷಿ, ವೃಕ್ಷಮಾತೆ, ಸಾಲುಮರದ ತಿಮ್ಮಕ್ಕನವರು ನಮ್ಮ ಸ್ವಗೃಹಕ್ಕೆ ಇಂದು ಭೇಟಿ ನೀಡಿ, ನಮ್ಮ ಮಕ್ಕಳಿಗೆ ಹರಸಿ, ಹಾರೈಸಿದ ಕ್ಷಣ’ ಎಂದು ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here