ಜಗತ್ತಿನ ಮೊಟ್ಟ ಮೊದಲ ಕೊರೋನಾ ಲಸಿಕೆ ರಷ್ಯಾದಿಂದ ನೋಂದಣಿ; ಅಧ್ಯಕ್ಷ ಪುಟಿನ್ ಪುತ್ರಿಗೂ ಲಸಿಕೆ ನೀಡಿದ ವೈದ್ಯರು!

russia-developed-first-corona-vaccine-announced-vladimir-virus

ಮಾಸ್ಕೋ: ಹಲವಾರು ದೇಶಗಳು ಲಸಿಕೆಗಾಗಿ ಸಂಶೋಧನೆ ನಡೆಸುತ್ತಿರುವ ಸಮಯದಲ್ಲಿ ರಷ್ಯಾ ಜಗತ್ತಿನ ಮೊಟ್ಟ ಮೊದಲ ಕೊರೊನಾ ಲಸಿಕೆ ಬಿಡುಗಡೆಗೆ ಸಿದ್ಧವಾಗಿದೆ. ಕುತೂಹಲಕಾರಿ ವಿಷಯ ಏನೆಂದರೆ ರಷ್ಯಾ ಅಧ್ಯಕ್ಷ ಮೊದಲು ತನ್ನ ಮಗಳಿಗೆ ಈ ಲಸಿಕೆ ನೀಡಿ ಜಗತ್ತಿಗೆ ಈ ಲಸಿಕೆಯಿಂದ ಯಾವುದೇ ಹಾನಿಯಿಲ್ಲ ಎಂದು ಸಾಬೀತು ಮಾಡಿದ್ದಾರೆ.

ರಷ್ಯಾದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಕೋವಿಡ್‌19 ಲಸಿಕೆ ಜನರ ಬಳಕೆಗೆ ಬಿಡುಗಡೆಯಾಗಲಿದೆ. ರಷ್ಯಾದ ಆರೋಗ್ಯ ಸಚಿವಾಲಯ ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ನೀಡಿದ್ದು, ಆ ಮೂಲಕ ಜಗತ್ತಿನ ಮೊದಲ ಕೋವಿಡ್‌-19 ಲಸಿಕೆ ಮಂಗಳವಾರ ಅಧಿಕೃತವಾಗಿ ನೋಂದಣಿಯಾಗಿದೆ ಎಂದು ಹೇಳಿದ್ದಾರೆ.

‘ದೇಶದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಕೊರೊನಾ ವೈರಸ್‌ ಲಸಿಕೆಯನ್ನು ಬಳಕೆಗೆ ನೋಂದಾಯಿಸಲಾಗಿದೆ ಹಾಗೂ ಇಬ್ಬರು ಮಕ್ಕಳಲ್ಲಿ ಒಬ್ಬಳಿಗೆ ಈಗಾಗಲೇ ಲಸಿಕೆ ನೀಡಲಾಗಿದೆ’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ.

ಇದನ್ನೂ ಓದಿರಿ: ವರ್ಷಾಂತ್ಯಕ್ಕೆ ಭಾರತದ ಕೊರೊನಾ ಲಸಿಕೆ ಲಭ್ಯ..!

ಮಾಸ್ಕೊದ ‘ಗಮೆಲಿಯಾ ಸಂಶೋಧನಾ ಸಂಸ್ಥೆ’ ಮತ್ತು ರಷ್ಯಾದ ರಕ್ಷಣಾ ಸಚಿವಾಲಯ ಜಂಟಿಯಾಗಿ ಲಸಿಕೆ ಅಭಿವೃದ್ಧಿ ಪಡಿಸಿದೆ ಎಂದು ಹೇಳಲಾಗಿದೆ. ಈ ಲಸಿಕೆಯನ್ನು ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮನುಷ್ಯರ ಮೇಲೆ ಪ್ರಯೋಗ ನಡೆಸಲಾಗಿದೆ. ಸತತ ಯಶಸ್ವಿ ಎರಡು ಟ್ರಯಲ್ ಗಳನ್ನು ಇದು ಪಾಸ್ ಮಾಡಿದ್ದು, ಮೂರನೆ ಟ್ರಯಲ್ ಮಾಡದೆ ಬಿಡುಗಡೆ ಮಾಡಲಾಗುತ್ತಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿ ಭಾಗಿಯಾದ ಎಲ್ಲ 38 ಜನರಲ್ಲಿಯೂ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದನ್ನು ಗಮನಿಸಿರುವುದಾಗಿ ರಷ್ಯಾ ರಕ್ಷಣಾ ಸಚಿವಲಯ ಹೇಳಿದೆ. ಜೂನ್‌ 18 ರಿಂದ ಮನುಷ್ಯರ ಮೇಲೆ ಕ್ಲಿನಿಕಲ್‌ ಟ್ರಯಲ್‌ಗಳನ್ನು ಈ ಸಂಸ್ಥೆಯು ಆರಂಭಿಸಲಾಗಿತ್ತು. ಪ್ರಯೋಗಕ್ಕೆ ಒಳಗಾದವರ ಮೊದಲ ಗುಂಪು ಜುಲೈ 15 ರಂದು ಸಂಶೋಧನಾ ಕೇಂದ್ರಗಳಿಂದ ಬಿಡುಗಡೆಯಾಗಿದ್ದು, ಎರಡನೇ ಗುಂಪು ಜುಲೈ 20 ರಂದು ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ದಿನಗಳಲ್ಲಿ ಅಗತ್ಯವಿರುವ ಪ್ರಮಾಣದ ಲಸಿಕೆಗಳನ್ನು ತಯಾರಿಸಲಾಗುವುದು. ಕೆಲವೇ ದಿನಗಳಲ್ಲಿ ಮಿಲಿಯನ್ ಪ್ರಮಾಣದ ಲಸಿಕೆಗಳು ತಯಾರಾಗಿ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಅಧ್ಯಾಪಕರಿಗೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here