ಬೆಂಗಳೂರು: ತೀವ್ರ ಜಿದ್ದಾ ಜಿದ್ದಿನ ಪೈಪೋಟಿಗೆ ಕಾರಣವಾಗಿದ್ದ ರಾಜರಾಜೇಶ್ವರಿ ನಗರ ವಿಧಾನಸಭಾ ಉಪಚುನಾವಣಾ ಕಣದಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಸದ್ಯ ಬಿಜೆಪಿಯ ಅಭ್ಯರ್ಥಿ ಮುನಿರತ್ನ ಅವರು ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಈದೀಗ ಐದು ಸುತ್ತುಗಳ ಮತ ಎಣಿಕೆ ಕಾರ್ಯ ಮುಗಿಸಿದ್ದಾರೆ.
ಐದನೆಯ ಸುತ್ತಿನ ಮತ ಎಣಿಕೆಯ ನಂತರ ಬಿಜೆಪಿಯ ಅಭ್ಯರ್ಥಿ ಮುನಿರತ್ನ ಅವರು ಒಟ್ಟು 14,843 ಮತಗಳನ್ನು ಪಡೆದುಕೊಂಡು ಮುನ್ನಡೆಯನ್ನು ಪಡೆದಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು 8,821 ಮತಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಮುನಿರತ್ನ ಅವರು 6022 ಮತಗಳ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿರಿ: ಉಪಚುನಾವಣಾ ಫಲಿತಾಂಶ: ಆರ್.ಆರ್.ನಗರ, ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಗಳ ಭರ್ಜರಿ ಮುನ್ನಡೆ