ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ 37 ರನ್ನುಗಳ ಗೆಲುವನ್ನು ದಾಖಲಿಸಿತು.

ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆರ್ ಸಿ ಬಿ ಮೊದಲಿಗೆ ಪಿಂಚ್ ವಿಕೆಟ್ ಕಳೆದುಕೊಂಡಿತು. ನಂತರ ಪಡಿಕ್ಕಲ್ ಜೊತೆಗೆ ಸೇರಿ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಕಟ್ಟಿದರು. ಆದರೆ ನಂತರದಲ್ಲಿ ಪಡಿಕ್ಕಲ್, ಡಿವಿಲಿಯರ್ಸ್ ಸಹ ವಿಕೆಟ್ ಕಳೆದುಕೊಂಡರು. ವಿರಾಟ್ ಕೊಹ್ಲಿ 52 ಎಸೆತಗಳ್ಳಿ ಅಜೇಯ 90 ರನ್ನುಗಳನ್ನು ಗಳಿಸಿದರು. 4 ವಿಕೆಟ್ ಕಳೆದುಕೊಂಡು ನಿಗದಿತ 20 ಓವರ್ ಗಳಲ್ಲಿ 169 ರನ್ನುಗಳನ್ನು ಗಳಿಸಲು ಕೊಹ್ಲಿ ಪದೇ ಶಕ್ತವಾಯಿತು.

170 ರನ್ನುಗಳ ಗುರಿಯನ್ನು ಪಡೆದ ಚೆನ್ನೈ ಕೇವಲ 19 ರನ್ನುಗಳನ್ನುಗಳಿಸುವ ವೇಳೆಗೆ ಮೊದಲ ವಿಕೆಟ್ ಕಳೆದುಕೊಂಡಿತು. ನಂತರದಲ್ಲಿ ಡ್ಯೂಪ್ಲೆಸಿಸ್ 8, ವಾಟ್ಸನ್ 14, ಅಂಬಟಿ ರಾಯುಡು 42, ಏನ್ ಜಗದೀಶನ್ 33 , ಧೋನಿ 10, ಜಡೇಜಾ 7 ಮತ್ತು ಡ್ವೇನ್ ಬ್ರಾವೊ 7 ರನ್ನುಗಳನ್ನು ಗಳಿಸಿದರು. ಕೊನೆಯದಾಗಿ ಚೆನ್ನೈ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ನುಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

ಇದನ್ನೂ  ಓದಿರಿ: ಐಪಿಎಲ್ 2020: ಆರು ಸಾವಿರ ರನ್ನುಗಳನ್ನು ಸೇರಿಸಿ ದಾಖಲೆ ಬರೆದ ವಿರಾಟ್ ಕೊಹ್ಲಿ

LEAVE A REPLY

Please enter your comment!
Please enter your name here