ಬ್ರಿಟನ್: ನೂತನ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆಯಾಗಿದ್ದು, ಸಂಜೆ 6.30 ರ ಸುಮಾರಿಗೆ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಹೊರಬಿದ್ದಿದೆ. ಇನ್ನು ಅಕ್ಟೋಬರ್ 28 ರಂದು ರಿಷಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಿಷಿ ಸುನಕ್ ಗೆ ಬರೋಬ್ಬರಿ 193 ಸಂಸದರು ಬೆಂಬಲ ನೀಡಿದ್ದು ಇನ್ನು ರಿಷಿ ಸುನಕ್ ಗೆ ಪ್ರಬಲ ಸ್ಪರ್ಧಿಯಾಗಿದ್ದ ಸಂಸದೆ ಪೆನ್ನಿ ಮೋರ್ಡಾಂಟ್ ಗೆ 26 ಸಂಸದರು ಮಾತ್ರ ಬೆಂಬಲ ನೀಡಿದ್ದು ಹೀಗಾಗಿ ಪ್ರಧಾನಿ ಹುದ್ದೆ ಸ್ಪರ್ಧೆಯಿಂದ ಮೋರ್ಡಾಂಟ್ ಹಿಂದೆ ಸರಿದಿದ್ದಾರೆ.
ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತೆ ಪ್ರಧಾನಿ ರೇಸ್ ನಿಂದ ಹೊರಗುಳಿದ ನಂತರ ಅವರ ನಿಷ್ಠರಾದ ಪ್ರೀತಿ ಪಟೇಲ್ , ಭಾರತೀಯ ಸಂಜಾತ ರಿಷಿ ಸುನಕ್ ಗೆ ಬೆಂಬಲ ವ್ಯಕ್ತಪಡಿಸಿದ್ದು, ಅವರು ಬ್ರಿಟನ್ ಪ್ರಧಾನಿಯಾಗುವುದು ಬಹುತೇಕ ನಿಶ್ಚಿತವಾಗಿತ್ತು.
ಇನ್ಫೋಸಿಸ್ ನ ನಾರಾಯಣ ಮೂರ್ತಿ-ಸುಧಾ ಮೂರ್ತಿ ಅವರ ಅಳಿಯನೂ ಆಗಿರುವ ರಿಷಿ ಸುನಕ್ ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದ್ದಾರೆ.