ಮುಂಬೈ: ಡ್ರಗ್ ಜಾಲದೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಬಾಲಿವುಡ್ ನಟಿ ರೀಯಾ ಚಕ್ರವರ್ತಿ ಅವರಿಗೆ ಇಂದು ಬಾಂಬೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ಒಂದು ತಿಂಗಳಿನಿಂದ ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕುಲಾ ಜೈಲು ಸೇರಿದ್ದ ರೀಯಾ ಅವರಿಗೆ ಇಂದು ಬಿಡುಗಡೆಯ ಭಾಗ್ಯ ದೊರೆತಿದ್ದು, ಈ ಸಂಬಂಧ ಮಾತನಾಡಿರುವ ಅವರ ಪರ ವಕೀಲ ಸತೀಶ್ ಮನೇಶಿಂದೆ, ” ಬಾಂಬೆ ಹೈಕೋರ್ಟ್ ನೀಡಿರುವ ಆದೇಶದಿಂದ ನಾವು ಸಂತೋಷಗೊಂಡಿದ್ದೇವೆ. ಸತ್ಯ ಮತ್ತು ನ್ಯಾಯಕ್ಕೆ ಗೆಲುವು ದೊರೆತಿದೆ ಎಂದು ಹೇಳಿದ್ದಾರೆ.
ರೀಯಾ ಅವರಿಗೆ ಕೆಲವು ಷರತ್ತುಗಳನ್ನು ಹಾಕಿದ್ದು, ಹತ್ತು ದಿನಗಳಿಗೆ ಒಮ್ಮೆ ಮುಂಬೈ ಪೋಲೀಸರ ಮುಂದೆ ಬಂದು ಹಾಜರಾಗಬೇಕು. ತಿಂಗಳಿಗೆ ಒಂದು ಬಾರಿಯಂತೆ ಮುಂದಿನ ೬ ತಿಂಗಳು ಏನ್ ಸಿ ಬಿ ಎದುರು ಹಾಜರಾಗಬೇಕು ಎಂದು ಸೂಚಿಸಿದೆ. ಇದಲ್ಲದೆ ಒಂದು ಲಕ್ಷ ರೂಪಾಯಿಯ ವಯಕ್ತಿಕ ಬಾಂಡ್ ಮತ್ತು ಸಾಕ್ಷ್ಯಾಧಾರ ನಾಶ ಪಡಿಸುವ ಕಾರ್ಯದಲ್ಲಿ ತೊಡಗದಂತೆ ಎಚ್ಚರಿಕೆಯನ್ನು ಬಾಂಬೆ ಹೈಕೋರ್ಟ್ ತಿಳಿಸಿದೆ.