republic-tvs-arnab-goswami-can-use-tagline-nation-wants-to-know-as-part-of-speech-delhi-hc

ನವದೆಹಲಿ: ರಿಪಬ್ಲಿಕ್ ನ್ಯೂಸ್ ಚಾನಲ್ ನ ಪ್ರಧಾನ ಸಂಪಾದಕರಾದ ಅರ್ನಬ್ ಗೋಸ್ವಾಮಿ ತಮ್ಮ ವಾಹಿನಿಯ ಚರ್ಚೆಗಳಲ್ಲಿ ‘ನೇಷನ್ ವಾಂಟ್ಸ್ ಟು ನೋ’ ಎನ್ನುವ ಟ್ಯಾಗ್ ಲೈನನ್ನು ಬಳಕೆ ಮಾಡಬಹುದು ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.

ರಿಪಬ್ಲಿಕ್ ನ್ಯೂಸ್ ಚಾನಲ್ ಚರ್ಚಾ ಕಾರ್ಯಕ್ರಮವೊಂದಕ್ಕೆ ‘ನ್ಯೂಸ್ ಹವರ್’ ಎಂಬ ಹೆಸರನ್ನು ಇಟ್ಟಿರುವುದು ಮತ್ತು ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ‘ನೇಷನ್ ವಾಂಟ್ಸ್ ಟು ನೋ’ ಎನ್ನುವ ಟ್ಯಾಗ್ ಲೈನನ್ನು ಬಳಕೆ ಮಾಡುವುದಕ್ಕೆ ನಿರ್ಬಂಧ ಹೇರಬೇಕು ಎಂದು ‘ಟೈಮ್ಸ್ ನೌ’ ವಾಹಿನಿಯ ಬೆನೆಟ್ ಆಂಡ್ ಕೋಲ್ಮನ್ ಆಂಡ್ ಕಂಪೆನಿ ಲಿಮಿಟೆಡ್ ಅರ್ಜಿಯನ್ನು ಸಲ್ಲಿಸಿತ್ತು.

ಈ ಎರಡೂ ಪದಗಳ ಬಳಕೆಯನ್ನು ಮಾಡದಂತೆ ಶಾಶ್ವತ ನಿರ್ಬಂಧ ಹೇರಬೇಕು ಎಂದು ‘ಟೈಮ್ಸ್ ನೌ’ ದೆಹಲಿ ಹೈಕೋರ್ಟ್ ಮುಂದೆ ಕೋರಿಕೊಂಡಿತ್ತು. ಈ ಕುರಿತು ವಿವರಣೆ ನೀಡಿದ ಕೋರ್ಟ್ ‘ನೇಷನ್ ವಾಂಟ್ಸ್ ಟು ನೋ’ ಎನ್ನುವ ಟ್ಯಾಗ್ ಲೈನ್ ಕುರಿತು ಪರಿಶೀಲಿಲನೆಯನ್ನು ನಡೆಸಬೇಕಾಗುತ್ತದೆ. ಹಾಗಾಗಿ ಈಗ ಆ ಕುರಿತು ತಡೆ ನೀಡಲು ಸಾಧ್ಯವಿಲ್ಲ. ಆದರೆ ‘ನ್ಯೂಸ್ ಹವರ್’ ಅಥವಾ ಅದನ್ನೇ ಹೋಲುವ ಯಾವುದೇ ಮುದ್ರೆಗಳನ್ನು ಬಳಕೆ ಮಾಡದಂತೆ ಎಚ್ಚರಿಕೆಯನ್ನು ನೀಡಿದೆ.

republic-tvs-arnab-goswami-can-use-tagline-nation-wants-to-know-as-part-of-speech-delhi-hc

ಈ ಮೂಲಕ ಅರ್ನಬ್ ಗೋಸ್ವಾಮಿ ತಮ್ಮ ಕಾರ್ಯಕ್ರಮದಲ್ಲಿ ‘ನೇಷನ್ ವಾಂಟ್ಸ್ ಟು ನೋ’ ಎನ್ನುವ ಪದವನ್ನು ಬಳಕೆ ಮಾಡಬಹುದಾಗಿದೆ. ಸದ್ಯ ಟಿ ಆರ್ ಪಿ ಹಗರಣ ಕುರಿತಂತೆ ತನಿಖೆ ಮತ್ತು ವಿಚಾರಣೆ ನಡೆಯುತ್ತಿದ್ದು, ಈ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿರಿ: ಲಡಾಕ್ ನಲ್ಲಿ ಚೀನಾ ಆಕ್ರಮಿಸಿಕೊಂಡ ಜಾಗವನ್ನು ಯಾವಾಗ ವಶಪಡಿಸಿಕೊಳ್ಳುತ್ತೀರಿ: ಪ್ರಧಾನಿಗೆ ರಾಹುಲ್ ಗಾಂಧಿ ಪ್ರಶ್ನೆ

LEAVE A REPLY

Please enter your comment!
Please enter your name here