ಅಂಬರೀಶ್
ಅಂಬರೀಶ್

ಬೆಂಗಳೂರು : ಹಿರಿಯ ಕಲಾವಿದ,ಮಾಜಿ ಸಚಿವ, ರೆಬಲ್ ಸ್ಟಾರ್ ಅಂಬರೀಶ ಅವರ ಅಂತ್ಯಕ್ರೀಯೆ ಇಂದು ಸೋಮವಾರ ಸಂಜೆ  ಕಂಠೀರವ  ಸ್ಟುಡಿಯೋದಲ್ಲಿ ನೆರವೇರಿತು. ಪೋಲಿಸ್ ಬ್ಯಾಂಡ್ ನ ರಾಷ್ಟ್ರಗೀತೆ ನುಡಿಸಿ, ಮೂರೂ ಸುತ್ತಿನ ಕುಶಾಲ ತೋಪು ಹಾರಿಸುವ ಮೂಲಕ ಸಕಲ ಸರಕಾರಿ ಗೌರವಗಳನ್ನು ಸಲ್ಲಿಸಲಾಯಿತು.

ಕಂಠೀರವ ಸ್ಟುಡಿಯೋದಲ್ಲಿ ಒಕ್ಕಲಿಗ ವಿಧಿ ವಿಧಾನದೊಂದಿಗೆ ಪುತ್ರ ಅಭಿಷೇಕ್ ಗೌಡ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ನೆರವೇರಿಸಲಾಯಿತು. ಶ್ರೀರಂಗಪಟ್ಟಣದ ವೈದಿಕ ಪಂಡಿತ ಭಾನುಪ್ರಕಾಶ್ ಶರ್ಮಾ ಅವರ ನೇತ್ರತ್ವದ ತಂಡ ಸಕಲ ವಿಧಿ ವಿಧಾನಗಳನ್ನು ನೆರವೆರಿಸಿಕೊಟ್ಟಿತು.

ಇದನ್ನೂ ಓದಿರಿ: #Breaking News ಮಂಡ್ಯದ ಗಂಡು ಅಂಬರೀಶ್ ಇನ್ನಿಲ್ಲ..!

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಟಿಯರಾದ ಬಿ. ಸರೋಜಾ ದೇವಿ, ಜಯಂತಿ, ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ಯಶ್, ದರ್ಶನ್, ರವಿಚಂದ್ರನ್, ಚಿರಂಜೀವಿ, ಮೋಹನ್ ಬಾಬು, ಸುಮನ್ ರಂಗನಾಥ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ರಾಜಕೀಯ ಮತ್ತು ಸಿನಿಮಾರಂಗದ ಅನೇಕ ಗಣ್ಯರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.

Image Copyright : Google.com

LEAVE A REPLY

Please enter your comment!
Please enter your name here