rcb-vs-kxip-preview-head-to-head-record

ದುಬೈ: ಶಾರ್ಜಾದಲ್ಲಿ ನಡೆಯಲಿರುವ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ ಐಪಿಎಲ್‌ ಪಂದ್ಯದಲ್ಲಿ ಆಟವಾಡಲಿದ್ದು, ಈ ಪಂದ್ಯದಲ್ಲಿ ಕ್ರಿಸ್ ಗೇಲ್ ಮಿಂಚಬಹುದು ಎಂದು ಆಶಿಸಲಾಗಿದೆ. ಪಂಜಾಬ್ ತಂಡ ಆಡಿರುವ ಏಳು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಕೈಚೆಲ್ಲಿದ್ದು, ಇಂದು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಶಾರ್ಜಾ ಪಿಚ್ ನಲ್ಲಿ ರನ್ ಮಳೆ ಹರಿಯುವುದು ಕಡಿಮೆಯಾಗಿದ್ದರೂ, ಗೆಲ್ ನಂತಹ ವೇಗದ ಆಟಗಾರನಿಗೆ ಸೂಕ್ತವಾಗಿದೆ. ಆದರೆ ಈ ಬಾರಿಯ ಐಪಿಎಲ್ ಪಂದ್ಯದಲ್ಲಿ ಸ್ಪರ್ಧೆಗೆ ಇಳಿಯದಿರುವುದರಿಂದ ಆರಂಭಿಕ ಪಂದ್ಯದಲ್ಲಿಯೇ ಅಬ್ಬರಿಸುವುದು ಸುಲಭವಾಗಿಲ್ಲ. ಫುಡ್ ಪಾಯಿಸನ್ ನಿಂದಾಗಿ ಈ ಬಾರಿಯ ಐಪಿಎಲ್ ಪಂದ್ಯಗಳನ್ನು ಮಿಸ್ ಮಾಡಿಕೊಂಡಿರುವ ಗೆಲ್ ಅವರನ್ನು ಈಗ ಯಾರ ಬದಲಾಗಿ ಕರೆತರಬಹುದು ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿರಿ: RCB vs KXIP: ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವಿರಾಟ್‌ ಕೊಹ್ಲಿ ಪಡೆ

ತಂಡದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದ ನಂತರವೂ ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡವು ಯಶಸ್ವಿ ಪ್ರದರ್ಶನವನ್ನು ನೀಡಲು ಸಾಧ್ಯವಾಗಿಲ್ಲ. ನಾಯಕ ಕೆ ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಇಬ್ಬರನ್ನು ಹೊರತುಪಡಿಸಿದರೆ ಬ್ಯಾಟಿಂಗ್ ವಿಭಾಗದಲ್ಲಿ ಮತ್ತಾರಿಂದಲೂ ಉತ್ತಮ ರನ್ನುಗಳು ಬರುತ್ತಿಲ್ಲ. ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಮತ್ತು ರವಿ ಬಿಷ್ಣೋಯಿ ಬಿಟ್ಟರೆ ಮತ್ತಾರಲ್ಲೂ ಆತ್ಮ ವಿಶ್ವಾಸ ಕಂಡುಬರುತ್ತಿಲ್ಲ. ಈ ಎಲ್ಲ ಕಾರಣಗಳಿಂದಾಗಿ ತಂಡವು ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

ಇನ್ನು ಆರ್ ಸಿಬಿ ಕೆಕೆಆರ್ ವಿರುದ್ಧ ಈ ಕ್ರೀಡಾಂಗಣದಲ್ಲಿ ಆಡಿದ ಅನುಭವವನ್ನು ಹೊಂದಿದೆ. ಆ್ಯರನ್‌ ಫಿಂಚ್‌ ಸಹ ಉತ್ತಮ ಫಾರ್ಮ್ ಕಂಡುಕೊಂಡಿದ್ದು, ತಂಡದ ಆಗ್ರ ನಾಲ್ಕು ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಸೇರಿದಂತೆ ಆಟಗಾರರನ್ನು ಎದುರಿಸುವುದು ಎದುರಾಳಿಗೆ ಸುಲಭದ ಮಾತಲ್ಲ. ಇದರಿಂದಿಗೆ ತಂಡವು ಬೌಲಿಂಗ್ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವರವಾಗಿದೆ.

LEAVE A REPLY

Please enter your comment!
Please enter your name here