ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಮುಂಡ್ಲಿಯ ಕೋಲ್ಡ್ ಡ್ರಿಂಕ್ಸ್ ಪ್ಯಾಕ್ಟರಿಯ ಮಾಲಿಕ ರತ್ನವರ್ಮ ಜೈನ್ (52) ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಅಜೆಕಾರಿನ ಪುಷ್ಪಾ ಕೋಲ್ಡ್ ಡ್ರಿಂಕ್ಸ್ ಪ್ಯಾಕ್ಟರಿಯ ಮಾಲಿಕ ರತ್ನವರ್ಮ ಜೈನ್ ಅವರು ಬೆಳಿಗ್ಗೆ ಫ್ಯಾಕ್ಟರಿ ತೆರೆದಾಗ ವಿದ್ಯುತ್ ವ್ಯತ್ಯಯವಾಗಿರುವುದನ್ನು ಗಮನಿಸಿ, ಜನರೇಟರ್ ಸಂಪರ್ಕ ಕಲ್ಪಿಸಲು ತೆರಳಿದ್ದಾರೆ. ಈ ಸಮಯದಲ್ಲಿ ಎಲೆಕ್ಟ್ರಿಕ್ ಸಂಪರ್ಕದಲ್ಲಿನ ದೋಷವನ್ನು ಗಮನಿಸಿದ ಅವರು ಎಲೆಕ್ಟ್ರೀಶಿಯನ್ ಗೆ ಕರೆಮಾಡಿ ತಕ್ಷಣ ಬರುವಂತೆ ತಿಳಿಸಿದ್ದಾರೆ. ಆದರೆ ಎಲೆಕ್ಟ್ರೀಶಿಯನ್ ಬರುವ ಮುನ್ನವೇ ಜನರೇಟರ್ ಶೆಡ್ ಗೆ ತೆರಳಿ ಸಂಪರ್ಕ ಸ್ಥಗಿತಗೊಳಿಸುವ ಪ್ರಯತ್ನದಲ್ಲಿರುವಾಗ ವಿದ್ಯುತ್ ಶಾಕ್ ತಗುಲಿದೆ. ವಿದ್ಯುತ್ ಸಮಪರ್ಕಕ್ಕೆ ಬಂದ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಅಜೆಕಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ನಡೆಸುತ್ತಿದ್ದಾರೆ.