ರಾಮ ಮತ್ತು ಕೃಷ್ಣ ಇತಿಹಾಸ ಪುರುಷರಲ್ಲ : ನಿವೃತ್ತ ನ್ಯಾಯಾಧೀಶರ ವಿವಾದಾತ್ಮಕ ಹೇಳಿಕೆ

rama-and-krishna-are-not-men-of-history-controversial-statement-by-retired-judge-vasant-mulasavalagi

ವಿಜಯಪುರ: ನಿವೃತ್ತ ನ್ಯಾಯಾಧೀಶ ವಸಂತ ಮುಳಸಾವಳಗಿ ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗ ಮಂದಿರದಲ್ಲಿ ನಡೆದ ‘ಸಂವಿಧಾನ ಆಶಯ ಈಡೇರಿದೆಯೇ?’ ಎನ್ನುವ ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಿವೃತ್ತ ನ್ಯಾಯಾಧೀಶ ವಸಂತ ಮುಳಸಾವಳಗಿ ಅವರು ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಾ, ಶ್ರೀರಾಮ ಮತ್ತು ಶ್ರೀಕೃಷ್ಣ ಐತಿಹಾಸಿಕ ವ್ಯಕ್ತಿಗಳಲ್ಲ. ಅವರು ಕೇವಲ ಕಾದಂಬರಿಯ ಪಾತ್ರಧಾರಿಗಳು. ಅಶೋಕ್‌ ಎಂಬತ್ತು ಸಾವಿರ ವಿಹಾರಗಳನ್ನು ಕಟ್ಟಿರುವ ಬಗ್ಗೆ ಕಲ್ಲಿನ ಕೆತ್ತನೆಗಳು ದೊರೆತಿವೆ. ಆತ ನಿಜವಾದ ಇತಿಹಾಸ ಪುರುಷ ಎಂದು ಹೇಳಿದರು.

ಇದನ್ನೂ ಓದಿರಿ: ಕಾಂಗ್ರೆಸ್ ಎಂದಿಗೂ ರಾಮನನ್ನು ನಂಬಲಿಲ್ಲ – ಖರ್ಗೆ ‘ರಾವಣ’ ಹೇಳಿಕೆಗೆ ಪ್ರಧಾನಿ ಮೋದಿ ಟಾಂಗ್

ನಮ್ಮಲ್ಲಿ ಚರ್ಚೆ ಮಾಡಲು ಹಲವಾರು ಸಮಸ್ಯೆಗಳು ಇದ್ದಾವೆ.  ನಿರುದ್ಯೋಗ, ಸೇರಿದಂತೆ ಹಲವು ಸಮಸ್ಯೆಗಳು ಪರಿಹಾರವಾಗಬೇಕಿದೆ. ಪೆಟ್ರೋಲ್‌ ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಮಾಡಿದ್ರೆ ಕೆಲವು ಮಂದಿ ವಿತ್ತಂಡ ವಾದ ಮಾಡುತ್ತಾರೆ ಅಂತ ಅವರು ಕಿಡಿಕಾರಿದರು.

ಅಕ್ಬರ್ ಹೆಂಡತಿ ಹಿಂದೂ ಇದ್ದರೂ. ಆಕೆ ಧರ್ಮಾಂತರ ಆಗಿರಲಿಲ್ಲ. ಅಕ್ಬರ್​ನ ಆಸ್ಥಾನದಲ್ಲಿ ಕೃಷ್ಣನ ಮಂದಿರ ಕಟ್ಟಿದ್ದಾನೆ, ಹೋಗಿ ನೋಡಬಹುದು. ಮುಸ್ಲಿಮರು ಹಾಗೆ ಮಾಡಿದ್ದಾರೆ, ಹೀಗೆ ಮಾಡಿದ್ದಾರೆ ಎನ್ನುವವರು ಭಾರತದಲ್ಲಿ ಮುಸ್ಲಿಮ್ ಆಳ್ವಿಕೆಯ 700 ವರ್ಷಗಳ ಇತಿಹಾಸ ಏನು ಹೇಳುತ್ತದೆ ಎನ್ನುವುದನ್ನು ಅರಿಯಬೇಕು ಎಂದರು.

ಇದನ್ನೂ ಓದಿರಿ:JNU Controversy: ಜೆಎನ್‌ಯು ಗೋಡೆಗಳಲ್ಲಿ ಬ್ರಾಹ್ಮಣ, ಬನಿಯಾ ವಿರೋಧಿ ಬರಹಗಳು

ಮುಸ್ಲಿಮರು ಹಿಂದೂಗಳನ್ನು ವಿರೋಧಿಸಿದ್ದರೆ ಭಾರತದಲ್ಲಿ ಇಂದು ಒಬ್ಬೇ ಒಬ್ಬ ಹಿಂದೂ ಇರುತ್ತಿರಲಿಲ್ಲ. ಎಲ್ಲ ಹಿಂದೂಗಳನ್ನು ಕೊಲ್ಲಬಹುದಿತ್ತು. ಭಾರತದಲ್ಲಿ ನೂರಾರು ವರ್ಷ ಆಳ್ವಿಕೆ ಮಾಡಿದರೂ ಮುಸ್ಲಿಮರು ಅಲ್ಪಸಂಖ್ಯಾತರಾಗಿಯೇ ಏಕೆ ಉಳಿದರು ಎಂದು ಅವರು ಪ್ರಶ್ನಿಸಿದರು. ಸಂವಿಧಾನದ ಆಶಯಗಳು ಸ್ಪಷ್ಟವಾಗಿವೆ ಮತ್ತು ನಿಖರವಾಗಿವೆ. ಅವುಗಳನ್ನು ಜಾರಿಗೊಳಿಸುವ ನಮ್ಮ ವ್ಯವಸ್ಥೆ ಎಡವುತ್ತಿರುವುದರಿಂದ ಸಂವಿಧಾನದ ಆಶಯ ಈಡೇರಿದೆಯೇ ಎಂಬ ಅನುಮಾನಗಳು ಮೂಡುತ್ತವೆ. ಯುವಜನತೆ ಜಾಗೃತರಾಗಿ ಕಾರ್ಯತತ್ಪರರಾದರೆ ಮಾತ್ರ ಇಂಥ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಹೇಳಿದರು.

LEAVE A REPLY

Please enter your comment!
Please enter your name here