2024ರ ಜನವರಿ 1 ರಂದು ಮೊದಲ ಹಂತದ ಅಯೋಧ್ಯಾ ರಾಮಮಂದಿರ ಲೋಕಾರ್ಪಣೆ!

ayodhya-verdict-supreme-court-allows-construction-of-ram-mandir-on-disputed-land

ನವದೆಹಲಿ: ಅಯೋದ್ಯೆಯಲ್ಲಿನ ಭವ್ಯ ರಾಮಮಂದಿರ (Ayodhya Ram temple) 2024 ರಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ತ್ರಿಪುರಾ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅಮಿತ್ ಶಾ ಮಾತನಾಡುತ್ತ, ” ಭವ್ಯ ರಾಮಮಂದಿರ 2024 ಜನವರಿ 1 ರಂದು ಉದ್ಘಾಟನೆ ನಡೆಯಲಿದೆ ಎಂದು ಹೇಳಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಹಾಗು ಸಿಪಿಐ(ಎಂ) ಅಡ್ಡಿಪಡಿಸುತ್ತ ರಾಜಕೀಯ ಮಾಡಿಕೊಂಡೆ ಬಂದಿದೆ. ಆದರೆ ರಾಮಮಂದಿರ ನಿರ್ಮಾಣ ಮಾಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಬಂದ ನಂತರ ಮೋದಿಯವರು ದೇವಾಲಯ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡು ವೇಗವಾಗಿ ಪೂರ್ಣಗೊಳಿಸುವತ್ತ ಗಮನ ಹರಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿರಿ: 20 ಕೋಟಿ ಟ್ವಿಟ್ಟರ್ ಬಳಕೆದಾರರ ಇ-ಮೇಲ್ ಮಾಹಿತಿ ಸೋರಿಕೆ

LEAVE A REPLY

Please enter your comment!
Please enter your name here