ram-nath-kovind-board-special-train-from-delhi-to-kanpur

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಹುಟ್ಟೂರಾದ ಕಾನ್ಪುರಕ್ಕೆ ಪತ್ನಿ ಸುನೀತಾ ದೇವಿ ಅವರ ಜೊತೆಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ರಾಷ್ಟ್ರಪತಿಯೊಬ್ಬರು ರೈಲಿನಲ್ಲಿ ಪ್ರಯಾಣ ಬೆಳೆಸಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.

ಇಂದಿನ ಕಾಲದಲ್ಲಿ ಪ್ರಸಿದ್ಧ ರಾಜಕೀಯ ವ್ಯಕ್ತಿಗಳು, ರಾಷ್ಟ್ರಪತಿಗಳು, ಹಿರಿಯ ಅಧಿಕಾರಿಗಳು ರೈಲಿನಲ್ಲಿ ಪ್ರಯಾಣ ಬೆಳೆಸುವುದು ಸಾಧ್ಯವಿಲ್ಲ. ರಾಷ್ಟ್ರಪತಿಯಾಗಿರುವ ಇವರಿಗೆ ವಿಶೇಷ ವಿಮಾನ ಪ್ರಯಾಣ ಮಾಡುವ ಅವಕಾಶವೂ ಇರುತ್ತದೆ. ಆದರೆ ರಾಮನಾಥ್ ಕೋವಿಂದ್ ಅವರು ರೈಲಿನಲ್ಲಿ ಪ್ರಯಾಣ ಬೆಳೆಸಿರುವುದು ಮಾದರಿಯಾಗಿದೆ.

ಇದನ್ನೂ ಓದಿರಿ: ದೇಶಿಯವಾಗಿ ಆಭಿವೃದ್ಧಿ ಪಡೆಸಿದ ʼ122 ಮಿಮೀ ಕ್ಯಾಲಿಬರ್ ರಾಕೆಟ್ʼ ಪರೀಕ್ಷೆ ಯಶಸ್ವಿ !

ಇದಕ್ಕೂ ಮೊದಲು 2006 ರಲ್ಲಿ ರಾಷ್ಟ್ರಪತಿಯಾಗಿ ಅಬ್ದುಲ್ ಕಲಾಂ ಅವರು ಪ್ರಯಾಣ ಮಾಡಿದ್ದರು. ಅದಾದ 15 ವರ್ಷಗಳ ಬಳಿಕ ರಾಷ್ಟ್ರಪತಿಯೊಬ್ಬರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ರಾಷ್ಟ್ರಪತಿಯಾದ ಬಳಿಕ ಇದೇ ಮೊದಲಬಾರಿಗೆ ಅವರು ತಮ್ಮ ಹುಟ್ಟೂರಿಗೆ ತೆರಳಿದ್ದಾರೆ. ಅಲ್ಲಿ ತಮ್ಮ ಶಿಕ್ಷಣ ಪೂರೈಸಿದ ಶಾಲೆ ಸೇರಿದಂತೆ ಹಲವು ಕಡೆಗಳಲ್ಲಿ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here