rahul-gandhi-and-his-family-will-make-india-italy-say-up-cp-yogi-adityanath

ರಾಹುಲ್ ಗಾಂಧಿ ಮತ್ತು ಅವರ ಪರಿವಾರದವರ ಮಾತನ್ನು ಕೇಳುತ್ತಾ ಹೋದರೆ ಭಾರತವು ಇಟಲಿಯ ಕೊರೊನಾ ಭೀಕರತೆಯನ್ನು ಅನುಭವಿಸಬೇಕಾಗುತ್ತದೆ ಎಂದು ಯೋಗಿ ಆದಿತ್ಯನಾಥ್ ಖಾಸಗಿ ವಾಹಿನಿಯ ಸಂಪಾದಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಪರೀಕ್ಷೆಗಳು ಸರಿಯಾಗಿ ನಡೆಯುತ್ತಿಲ್ಲಾ, ಇಲ್ಲಿ ಸೋಂಕಿತರ ಚಿಕಿತ್ಸೆಗೆ ಸರಿಯಾದ ವ್ಯವಸ್ಥೆಗಳನ್ನು ಮಾಡಿಲ್ಲಾ ಎಂದು ರಾಹುಲ್ ಗಾಂಧಿ ನಿರಂತರವಾಗಿ ಪ್ರಶ್ನೆ ಎತ್ತುತ್ತಿದ್ದಾರೆ ಎಂದು ಸಂಪಾದಕರು ಯೋಗಿ ಆದಿತ್ಯನಾಥ್ ಅವರಿಗೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತರಪ್ರದೇಶ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಂಪೂರ್ಣ ಸಿದ್ಧವಾಗಿದೆ. ಇಲ್ಲಿ ವೇಗವಾಗಿ ಕೊರೊನಾ ಸೋಂಕಿನಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಉತ್ತರ ಪ್ರದೇಶದ ಕೊರೊನಾ ಯಶಸ್ಸಿನ ಹೋರಾಟದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಕೈವಾಡವಿದೆ. ಅವರ ಮಾರ್ಗದರ್ಶನದಂತೆ ಮುನ್ನಡೆಯುತ್ತಿದ್ದೇವೆ. ಫಲಿತಾಂಶ ಎಲ್ಲರ ಮುಂದಿದೆ. ಮೊದಲ ಪ್ರಕರಣ ಪತ್ತೆಯಾದಾಗ ನಮ್ಮಲ್ಲಿ ಯಾವುದೇ ಪರೀಕ್ಷಾ ಕೇಂದ್ರಗಳೇ ಇರಲಿಲ್ಲ. ಇಂದು 32ಕ್ಕೂ ಹೆಚ್ಚು ಲ್ಯಾಬ್ಗಳನ್ನು ಸ್ಥಾಪಿಸಲಾಗಿದೆ.ಪ್ರತಿದಿನ 12 ಸಾವಿರ ಟೆಸ್ಟ್ ಗಳನ್ನು ನಡೆಸಲಾಗುತ್ತಿದೆ. ಜೂನ್ 15 ರ ವೇಳೆಗೆ  15 ಸಾವಿರ ಪರೀಕ್ಷೆಗಳನ್ನು ನಡೆಸಲು ಶಕ್ತವಾಗುತ್ತೇವೆ ಎಂದು ಹೇಳಿದರು.

ಉತ್ತರ ಪ್ರೆದೆಶದಲ್ಲಿ ಕೊರೊನಾ ಸೊಂಕಿತರನ್ನು ಹೊರಗಡೆ ತಿರುಗಾಡಲು ಬಿಡುತ್ತಿಲ್ಲ. ರೋಗಿಗಳ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸುತ್ತಿದೆ. ಅಗತ್ಯ ಪ್ರಖರಣಗಳಲ್ಲಿ ಆಮ್ಲಜನಕ ವ್ಯವಸ್ಥೆಗಳನ್ನು ಪುರೈಸಲಾಗುತ್ತದೆ. ರೋಗಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸರಕಾರದ ವತಿಯಿಂದ ಒದಗಿಸಲಾಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here