ragini-dwivedi-and-sanjana-reportedly-fight-in-parappana-agrahara-jail

ಬೆಂಗಳೂರು: ಮಾದಕ ಲೋಕದ ನಂಟು ಹೊಂದಿರುವ ಆರೋಪದ ಮೇಲೆ ಸಿಬಿಐ ಅತಿಥಿಗಳಾಗಿರುವ ಸ್ಯಾಂಡಲ್ ವುಡ್ ನಟಿ ಮಣಿಯರಾದ ರಾಗಿಣಿ ಮತ್ತು ಸಂಜನಾ ಜೈಲಿನಲ್ಲಿ ಪರಸ್ಪರ ಕಿತ್ತಾಟದಲ್ಲಿ ತೊಡಗಿದ್ದಾರಂತೆ. ಇವರ ಜಗಳಕ್ಕೆ ಪೊಲೀಸ್ ಸಿಬ್ಬಂದಿ ಬೇಸತ್ತು ಹೋಗಿದ್ದು, ಇವರು ಬೆಲ್ ತೆಗೆದುಕೊಂಡು ಹೊರನಡೆದೆ ಸಾಕು ಎನ್ನುವ ಮಟ್ಟಿಗೆ ಬಂದಿದ್ದಾರಂತೆ.

ಪ್ರತಿನಿತ್ಯ ರಾಗಿಣಿ ಮತ್ತು ಸಂಜನಾ ಯಾವುದಾದರೂ ವಿಷಯಕ್ಕೆ ಕಿತ್ತಾಡುತ್ತಲೇ ಇರುತ್ತಾರಂತೆ. ಕುಂತರು ನಿಂತರು ಇವರ ಜಗಳ ಸಾಗುತ್ತಲೇ ಇರುತ್ತದೆಯಂತೆ. ಇದರಿಂದ ಜೈಲಿನ ಇತರ ಕೈದಿಗಳಿಗೂ ತೊಂದರೆ ಉಂಟಾಗುತ್ತಿದ್ದು, ಮಾತಿಗೂ ಕಿವಿಗೊಡುತ್ತಿಲ್ಲ ಎನ್ನಲಾಗಿದೆ.

ಇವರ ಜಗಳದಿಂದ ಕೈದಿಗಳಿಗೆ ಮತ್ತು ಸಿಬ್ಬಂದಿಗೆ ದೊಡ್ಡ ಸಮಸ್ಯೆಯೇ ಉಂಟಾಗಿದ್ದು, ಇಡಿ ತನ್ನ ತನಿಖೆಯನ್ನು ಚುರುಕುಗೊಳಿಸಿದ ನಂತರ ಇವರ ಜಗಳ, ರಂಪಾಟ ಇನ್ನೂ ಹೆಚ್ಚಾಗಿದೆ. ಇಬ್ಬರೂ ಜಗಳವಾಡಿ ನಂತರ ಅಳಲು ಪ್ರಾರಂಭಿಸುತ್ತಿದ್ದಾರೆ ಎಂದು ಸಿಬ್ಬಂದಿಗಳು ತಮ್ಮ ಗೋಳು ತೋಡಿಕೊಂಡಿದ್ದಾರಂತೆ.

ಇದನ್ನೂ ಓದಿರಿ: ರಾಜ್ಯದಲ್ಲಿ ಶಾಲೆ ಆರಂಭದ ಚರ್ಚೆಯ ಸಮಯದಲ್ಲೇ ಶಾಕ್: ವಠಾರ ಶಾಲೆಯ ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ಕೊರೋನಾ !

LEAVE A REPLY

Please enter your comment!
Please enter your name here