ಕನ್ನಡ ಚಿತ್ರರಂಗದ ಸಿಂಡ್ರೆಲಾ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಜೋಡಿ ಇಂದು ಸಿಹಿಸುದ್ದಿಯೊಂದನ್ನು ನೀಡಿದೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಜೋಡಿಗೆ ಇಂದು ಮಗು ಜನಿಸಿದೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
2018 ಡಿಸೆಂಬರ್ 2 ರಂದು ಮದುವೆಯಾದ ಈ ಜೋಡಿ ಕಳೆದವರ್ಷ ಮೊದಲನೆಯ ಮಗುವನ್ನು ಪಡೆದುಕೊಂಡಿದ್ದರು. ಕೆಲದಿನಗಳ ಹಿಂದೆ ಸ್ನೇಹಿತರಿಂದ ಸೀಮಂತ ಮಾಡಿಸಿಕೊಂಡು ಸುದ್ದಿಯಲ್ಲಿದ್ದ ರಾಧಿಕಾ ಅವರು, “ಇನ್ನು ಮುಂದಿನ ದಿನಗಳಲ್ಲಿ ನಮ್ಮ ಮನೆ ಡೈಪರ್ ನಿಂದ ತುಂಬಿ ಹೋಗಲಿದೆ” ಎಂದು ಹೇಳಿದ್ದರು.
ಇಂದು ಬೆಳಿಗ್ಗೆ ರಾಧಿಕಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ರಾಕಿಂಗ್ ಸ್ಟಾರ್ ಯಶ್ ಜೋಡಿಗೆ ಗಂಡು ಮಗು ಜನಿಸಿದ್ದು, ಅಭಿಮಾನಿಗಳಿಗೆ ಸಂತಸ ತಂದಿದೆ. ಮೊದಲ ಮಗುವಿನ ಜನನದ ನಂತರ ಹೆಣ್ಣುಮಗುವಿಗೆ ಯಾವ ಹೆಸರಿಡಬಹುದೆಂದು ತುಂಬಾ ಚರ್ಚೆಗಳು ನಡೆದಿದ್ದವು. ನಂತರ ಅಭಿಮಾನಿಗಳ ನಿರೀಕ್ಷೆ ಮೀರಿ ಆಯ್ರಾ ಎಂದು ಹೆಸರಿಟ್ಟಿದ್ದರು. ಇದೀಗ ಜೂನಿಯರ್ ರಾಕಿ ಬಾಯಿಗೆ ಯಾವಹೇಸರಿಡಬಹುದೆಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಆಸ್ಪತ್ರೆಗೆ ಬೇಟಿ ನೀಡಿದ ಯಶ್ ತಾಯಿ ಪುಟ್ಟ ಮಗು ನಮ್ಮ ಯಶ್ ತರಾನೆ ಇದೆ, ಸದ್ಯ ತಾಯಿ ಮತ್ತು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಯಶ್ ತಾಯಿ, ಅಭಿಮಾನಿಗಳ ಆಶೀರ್ವಾದ ಹೀಗೆಯೇ ನಮ್ಮ ಮೊಮ್ಮಕ್ಕಳ ಮೇಲೆಯೂ ಮುಂದುವರೆಯಲಿ ಎಂದು ಕೇಳಿಕೊಂಡಿದ್ದಾರೆ.