Tokyo Olympic: ಕ್ವಾರ್ಟರ್ ಫೈನಲ್ ನಲ್ಲಿ ಪಿವಿ ಸಿಂಧುಗೆ ಜಯ; ಭಾರತಕ್ಕೆ ಮತ್ತೊಂದು ಪದಕ ಖಚಿತ

ಟೋಕಿಯೋ: ರಿಯೋ ಒಲಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಟೋಕಿಯೋ ಒಲಂಪಿಕ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಭರ್ಜರಿ ಜಯಗಳಿಸಿದ್ದಾರೆ. ಈ ಮೂಲಕ ಭಾರತಕ್ಕೆ ಮೂರನೆಯ ಪದಕ ಖಚಿತವಾದಂತಾಗಿದೆ.

ಕ್ರೀಡಾಕೂಟದ ಪಂದ್ಯದಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಅವರು, ಜಪಾನ್ ನ ಅಕನೆ ಯಾಮಗುಚಿ (Akane Yamaguchi ) ಅವರ ವಿರುದ್ಧ 21-13, 22-20 ಸೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿದ್ದಾರೆ.

ಮೊದಲಿಗೆ ಆಕ್ರಮಣಕಾರಿ ಆಟವಾಡುತ್ತಿದ್ದ ಅಕನೆ ಯಾಮಗುಚಿ 6-5 ರ ಅಂತರದಿಂದ ಮುಂದಿದ್ದರು. ನಂತರ ಲಯವನ್ನು ಕಂಡುಕೊಂಡ ಸಿಂಧು 23 ನಿಮಿಷದಲ್ಲಿ 21-13 ಅಂತರದಲ್ಲಿ ಮೊದಲ ಸೆಟ್ ನಲ್ಲಿ ಗೆಲುವು ದಾಖಲಿಸಿದರು. ಇನ್ನು ಎರಡನೆಯ ಸೆಟ್ ನಲ್ಲಿ ಸಹ ಯಾಮಗುಚಿ ತೀವ್ರ ಪೈಪೋಟಿ ನೀಡಿದರು. ಆದರೆ 22-20 ಅಂತರದಿಂದ ಗೆದ್ದು, ಪಿವಿ ಸಿಂಧು ಸೆಮಿಫೈನಲ್ ಪ್ರವೇಶಿಸಿದರು.

ಜಪಾನ್ ನ ಅಕನೆ ಯಾಮಗುಚಿ ವಿಶ್ವದ ಮೊದಲ ಶ್ರೇಯಾಂಕಿತ ಆಟಗಾರ್ತಿಯಾಗಿದ್ದರು. ಆದರೆ ಈಗ ಐದನೆಯ ಶ್ರೇಯಾಂಕದಲ್ಲಿ ಇದ್ದಾರೆ. ಈ ಹಿಂದೆಯೂ ಹಲವು ಬಾರಿ ಸಿಂಧು ಮತ್ತು ಅಕನೆ ಯಾಮಗುಚಿ ಪರಸ್ಪರ ಎದುರಾಳಿಯಾಗಿ ಆಟವಾಡಿದ್ದಾರೆ. ಇದುವರೆಗೆ ಯಾಮಗುಚಿ 7 ಹಾಗೂ ಪಿವಿ ಸಿಂಧು 12 ರಲ್ಲಿ ಜಯಗಳಿಸಿದ್ದಾರೆ.

ಇದನ್ನೂ ಓದಿರಿಟೋಕಿಯೋ ಒಲಂಪಿಕ್ಸ್ : ಭಾರತಕ್ಕೆ ಮತ್ತೊಂದು ಪದಕ ಖಚಿತ !

LEAVE A REPLY

Please enter your comment!
Please enter your name here