ಬಾಸೆಲ್(ಸ್ವಿಟ್ಜರ್ಲ್ಯಾಂಡ್) : ಪಿ.ವಿ. ಸಿಂಧು ಭಾನುವಾರ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಸಿಂಗಲ್ಸ್ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು. ಈ ಪಂದ್ಯದಲ್ಲಿ ಜಪಾನ್‌ನ ಪ್ರತಿಸ್ಪರ್ಧಿ ನೊಝೋಮಿ ಒಕುಹರಾ ಅವರನ್ನು ಸೋಲಿಸುವ ಮೂಲಕ ಸಿಂಧು ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
      38 ನಿಮಿಷಗಳ ಫೈನಲ್‌ನಲ್ಲಿ ಸಿಂಧು, ಒಕುಹರಾ ಅವರನ್ನು 21–7, 21–7 ರ ನೇರ ಸೆಟ್ ಗಳ ಅಂತರದಲ್ಲಿ ಸೋಲಿಸಿದರು. ಎರಡು ವರ್ಷಗಳ ಹಿಂದೆ ನಡೆದ ಪಂದ್ಯಾವಳಿಯ ಫೈನಲ್‌ನಲ್ಲಿ ಸಿಂಧು ಒಕುಹರಾ ವಿರುದ್ಧ ಸೋತಿದ್ದಕ್ಕೆ ಪ್ರತೀಕಾರ ತೀರಿಸಿಕೊಂಡರು. 2017 ರಲ್ಲಿ, ಒಕುಹರಾ 110 ನಿಮಿಷಗಳ ಅಂತಿಮ ಪಂದ್ಯದಲ್ಲಿ ಪಿ.ವಿ.ಸಿಂಧು ಅವರನ್ನು ಸೋಲಿಸಿದ್ದರು. ಈ ಪಂದ್ಯವನ್ನು ಬ್ಯಾಡ್ಮಿಂಟನ್ ಇತಿಹಾಸದ ರೋಚಕ ಪಂದ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
       ಪಂದ್ಯದ ನಂತರ ಮಾತನಾಡಿದ ಸಿಂಧು, “ಕೊನೆಯ ಬಾರಿ ನಾನು ಫೈನಲ್‌ನಲ್ಲಿ ಸೋತಿದ್ದೇ, ಫೈನಲ್‌ನಲ್ಲಿ ಈ ಬಾರಿ ಗೆಲುವು ದಾಖಲಿಸುವುದು ನನಗೆ ಬಹಳ ಮುಖ್ಯವಾಗಿತ್ತು. ಪ್ರೋತ್ಸಾಹಕ್ಕಾಗಿ ಇಲ್ಲಿನ ಪ್ರೇಕ್ಷಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ನನ್ನ ದೇಶಕ್ಕಾಗಿ ಈ ಗೆಲುವು ತಂದಿದ್ದು ಹೆಮ್ಮೆ ಎನಿಸುತ್ತಿದೆ ಎಂದು ಅವರು ಹೇಳಿದರು. ಕಿಮ್ ಜೊತೆಗೆ ನನ್ನ ತರಬೇತುದಾರ ಗೋಪಿ ಸರ್ ಮತ್ತು ಸಹ ಸದಸ್ಯರಿಗೆ ಕೃತಜ್ಞತೆ. ನಾನು ಈ ವಿಜಯವನ್ನು ನನ್ನ ತಾಯಿಯ ಅರ್ಪಿಸುತ್ತೇನೆ, ಇಂದು ಅವಳ ಜನ್ಮದಿನ. ಅಮ್ಮನಿಗೆ ಏನಾದರೂ ಗಿಫ್ಟ್ ಕೊಡಬೇಕು ಎಂದುಕೊಂಡಿದ್ದೆ. ಇಂದು ಈ ಚಿನ್ನದ ಪದಕವನ್ನು ಕೊಡುತ್ತಿದ್ದೇನೆ” ಎಂದು ಹೇಳಿದರು.
ಇದನ್ನೂ ಓದಿರಿ: ಸಕಲ ಸರಕಾರಿ ಗೌರವಗಳೊಂದಿಗೆ ಪಂಚ ಭೂತಗಳಲ್ಲಿ ಲೀನರಾದ ಅರುಣ್ ಜೇಟ್ಲಿ
SPONSORED CONTENT

LEAVE A REPLY

Please enter your comment!
Please enter your name here