puneeth-rajkumar-twitter-account-active-after-one-year-ahead-of-gandhada-gudi-release

ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಅಪಾರ ಅಭಿಮಾನಿ ಬಳಗ ಬೇಸರದಲ್ಲಿದೆ. ಅವರ ನೆನಪು ಸದಾ ಕಾಡುವಂತೆ ಆಗಿದೆ. ಇದೇ ಸಮಯದಲ್ಲಿ ಅವರ ಟ್ವಿಟ್ಟರ್ ಖಾತೆಯಿಂದ ಹೊಸ ಟ್ವಿಟ್ ಒಂದು ಬಂದಿದ್ದು, “ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ… Looking forward to see you all in the theaters” ಎಂದು ಬರೆಯಲಾಗಿದೆ.

ಪುನೀತ್ ರಾಜಕುಮಾರ್ ನೆನಪು ಅಭಿಮಾನಿಗಳ ಮನದಲ್ಲಿ ಸದಾ ಹಸಿರಾಗಿಯೇ ಇರಲಿದ್ದು, ಇದೀಗ ಅವರ ಕೊನೆಯ ಚಿತ್ರ “ಗಂಧದಗುಡಿ” ತೆರೆಯ ಮೇಲೆ ಬಂದಿದೆ. ಈ ಸಮಯದಲ್ಲಿ ಅವರ ಟ್ವಿಟ್ಟರ್ ಖಾತೆ ಸಕ್ರಿಯವಾಗಿದ್ದು, ಟ್ವಿಟ್ ಮಾಡಿರುವುದು ಒಮ್ಮೆ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಹೌದು ..! ಅಪ್ಪು ಕೊನೆಯದಾಗಿ ಟ್ವೀಟ್​ ಮಾಡಿದ್ದು 2021ರ ಅಕ್ಟೋಬರ್​ 29 ರಂದು. ನಿಧನರಾಗುವುದಕ್ಕೂ ಕೆಲವೇ ಕ್ಷಣಗಳ ಮುನ್ನ ಅವರು ‘ಭಜರಂಗಿ 2’ ಚಿತ್ರಕ್ಕೆ ಶುಭ ಕೋರಿ ಟ್ವೀಟ್​ ಮಾಡಿದ್ದರು. ಆ ಬಳಿಕ ಅವರ ಟ್ವಿಟರ್​ ಖಾತೆಯಿಂದ ಯಾವುದೇ ಪೋಸ್ಟ್​ ಮಾಡಲಾಗಿರಲಿಲ್ಲ. ಈಗ ಬರೋಬ್ಬರಿ ಒಂದು ವರ್ಷದ ಬಳಿಕ ಪುನೀತ್​ ರಾಜ್​ಕುಮಾರ್​ ಅವರ ಟ್ವೀಟರ್​ ಅಕೌಂಟ್​ ಮತ್ತೆ ಸಕ್ರಿಯವಾಗಿದೆ. ‘ಗಂಧದ ಗುಡಿ’ ಬಿಡುಗಡೆ ಹೊಸ್ತಿಲಿನಲ್ಲಿ ಟ್ವೀಟ್​ ಮಾಡಲಾಗಿದೆ.

ಇದನ್ನೂ ಓದಿರಿ:ಗಂಧದ ಗುಡಿ ಟ್ರೈಲರ್ ನೋಡಿ ಪ್ರಧಾನಿ ಮೋದಿ ಪ್ರಶಂಸೆ !

ಪುನೀತ್ ರಾಜಕುಮಾರ್ ಅವರು ಗಂಧದ ಗುಡಿ ಚಿತ್ರವನ್ನು ಬಹಳ ಪ್ರೀತಿಯಿಂದ ನಿರ್ಮಾಣ ಮಾಡಿದ್ದರು. ಈ ಕುರಿತಂತೆ ತಮ್ಮ ಸ್ನೇಹಿತರು ಮತ್ತು ಕನ್ನಡ ಚಿತ್ರೋದ್ಯಮದ ಹಲವು ಹಿರಿಯರೊಂದಿಗೆ ಸಂತಸದಿಂದ ಮಾಹಿತಿ ಹಂಚಿಕೊಂಡಿದ್ದರು. ಅಲ್ಲದೇ ಅದ್ಧುರಿಯಾಗಿ ತೆರೆಯಮೇಲೆ ತರುವ ಉದ್ದೇಶವನ್ನೂ ಹೊಂದಿದ್ದರು. ಆದರೆ ವಿಧಿ ಅವರಿಗೆ ಕೆಲಸ ಪೂರ್ಣಗೊಳಿಸಲು ಅವಕಾಶ ನೀಡಲಿಲ್ಲ. ಆದರೀಗ ಪಿ ಆರ್ ಕೆ ಪ್ರೊಡಕ್ಸನ್ ಅವರ ಕನಸನ್ನು ನನಸು ಮಾಡುತ್ತಿದೆ. ಇಂದು ಅಂದರೆ ಅಕ್ಟೋಬರ್​ 28 ರಂದು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಅವರ ಕನಸಿನ ಕೂಸಾದ ಗಂಧದ ಗುಡಿ ಚಿತ್ರ ಬಿಡುಗಡೆ ಪ್ರಯುಕ್ತ ಈ ಟ್ವಿಟ್ ಮಾಡಲಾಗಿದ್ದು, ಅಭಿಮಾನಿಗಳು ಎಮೋಷನಲ್ ಆಗಿದ್ದಾರೆ. ಒಂದು ಕ್ಷಣ ಪುನೀತ್​ ರಾಜ್​ಕುಮಾರ್​ ಅವರೇ ವಾಪಸ್​ ಬಂದಂಗೆ ಆಯ್ತು’ ಎಂದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ‘ಈ ಟ್ವೀಟ್​ ರೀತಿಯೇ ಅಪ್ಪು ಬಾಸ್​ ಕೂಡ ಸಡನ್ನಾಗಿ ಬಂದು ಬಿಡಲಿ’ ಎಂದು ಜನರು ಭಾವುಕವಾಗಿ ಪ್ರತಿಕ್ರಿಯಿದ್ದಾರೆ. ‘ಈ ಖಾತೆಯಿಂದ ಟ್ವೀಟ್​ ಬರುತ್ತದೆ ಅಂತ ನಾವು ಊಹಿಸಿಯೇ ಇರಲಿಲ್ಲ’ ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಈ ಪೋಸ್ಟ್​ ವೈರಲ್​ ಆಗಿದೆ. ‘ನಾವೂ ಕೂಡ ನಿಮ್ಮನ್ನು ನೋಡುವ ಕಾತುರದಲ್ಲಿದ್ದೇವೆ’ ಎಂದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿರಿ: ಪುನೀತ್ ಗೆ ಕರ್ನಾಟಕ ರತ್ನ ಪ್ರದಾನ ಕಾರ್ಯಕ್ರಮದಲ್ಲಿ ಅಮಿತಾಭ್, ರಜನಿಕಾಂತ್, ದೀಪಿಕಾ ಭಾಗಿ!

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here