puneeth-rajkumar-sanchari-vijay-chiranjeevi-sarja-born-on-17th-and-died-too-soon

ಎಲ್ಲರ ನೆಚ್ಚಿನ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ದಿಡೀರ್ ಅಗಲಿಕೆಯಿಂದ ಇಡೀ ಕರುನಾಡು ದುಃಖ ಸಾಗರದಲ್ಲಿ ಮುಳುಗಿಹೋಗಿದೆ. ಒಬ್ಬ ಪ್ರತಿಭಾನ್ವಿತ ಮತ್ತು ಸಜ್ಜನ ನಟನನ್ನು ಕಳೆದುಕೊಂಡು ಅಭಿಮಾನಿಗಳು ಕಂಗಾಲಾಗಿದ್ದಾರೆ.

ಕನ್ನಡ ಚಿತ್ರರಂಗ ಕಳೆದ ಒಂದೂವರೆ ವರ್ಷದಿಂದ ಒಂದಾದ ನಂತರ ಒಂದು ಪ್ರತಿಭಾವಂತ ನಟರನ್ನು ಕಳೆದುಕೊಳ್ಳುತ್ತಾ ಬಂದಿದೆ. ಮೊದಲಿಗೆ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಸಾವನ್ನಪ್ಪಿದರೆ, ನಂತರ ಸಂಚಾರಿ ವಿಜಯ್ ಅವರು ರಸ್ತೆಯ ಅಪಘಾತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಇವರ ನಂತರ ಇದೀಗ ಪುನೀತ್ ಕೂಡಾ ಹೃದಯಾಘಾತಕ್ಕೆ ಒಳಗಾಗಿದ್ದು, ಕನ್ನಡ ಚಿತ್ರರಂಗ ಪ್ರತಿಭಾನ್ವಿತ ಯುವ ನಟರನ್ನು ಕಳೆದುಕೊಂಡಿದೆ. ಈ ನಡುವೆ ಒಂದು ಸುದ್ದಿ ಹರಿದಾಡುತ್ತಿದ್ದು, ತಮ್ಮ ಪ್ರಾಣವನ್ನು ಅಕಾಲದಲ್ಲಿ ಕಳೆದುಕೊಂಡ ಈ ಮೂವರೂ 17 ನೇಳನೆಯ ತಾರೀಕಿನಂದು ಜನಿಸಿದ್ದರು ಎಂಬ ಸುದ್ದಿ !

ಈ ಹದಿನೇಳನೆಯ ತಾರೀಖು ಸ್ಯಾಂಡಲ್ ವುಡ್ ನ ನಟರ ಪಾಲಿಗೆ ಕಂಟಕವಾಗಿದ್ಯಾ ? ಅಥವಾ ಇದು ಕಾಕತಾಳೀಯವಾ? ಎಂಬ ಪ್ರಶ್ನೆ ಮೂಡಿದೆ. ಚಿರಂಜೀವಿ ಸರ್ಜಾ ಅವರು 17 ಅಕ್ಟೋಬರ್ 1984 ರಂದು ಜನಿಸಿದ್ದರೆ, ಸಂಚಾರಿ ವಿಜಯ್ ಅವರು 17 ಜುಲೈ 1983 ರಲ್ಲಿ ಜನಿಸಿದ್ದರು. ಇದೀಗ ನಮ್ಮನ್ನಗಲಿದ ಪುನೀತ್ ಕೂಡಾ 17 ಮಾರ್ಚ್ 1975 ರಲ್ಲಿ ಜನಿಸಿದವರು. ಈ ಮೂವರೂ ನಟರು ಕಾಕತಾಳೀಯ ಎಂಬಂತೆ 17 ನೇ ತಾರೀಖಿನಂದೇ ಜನಿಸಿದ್ದಾರೆ. ಈ ಮೂಲಕ ಈ ಸಾವುಗಳೆಲ್ಲವೂ ಕಾಕತಾಳೀಯವೊ ಅಥವಾ 17 ನೇ ತಾರೀಖು ಸ್ಯಾಂಡಲ್ ವುಡ್ ಗೆ ಶಾಪವೋ ಎಂಬ ಪ್ರಶ್ನೆ ಪ್ರತಿಯೊಬ್ಬ ಕನ್ನಡಿಗನ ಮನದಲ್ಲಿ ಮೂಡಿದೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here