ಬೆಂಗಳೂರು: ಮಹಿಳಾ ದಿನಾಚರಣೆಯ ಈ ವಿಶೇಷ ದಿನದಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ವಿಡಿಯೋದಲ್ಲಿ ‘ನಿರ್ಭಯ ಸಮಾಜ ಕಟ್ಟೋಣ’ ಎಂಬ ಸಂದೇಶವನ್ನು ನೀಡಿದ್ದಾರೆ.
ಇಂದಿನ ಮಹಿಳಾ ದಿನಾಚರಣೆಯ ನಿಮಿತ್ತ ಬಿಬಿಎಂಪಿ ತನ್ನ ರಾಯಬಾರಿಯಾದ ಪುನೀತ್ ರಾಜಕುಮಾರ್ ಅವರ ಒಂದು ವಿಡಿಯೋ ತಯಾರಿಸಿದ್ದು, ಮಹಿಳೆಯರ ಸುರಕ್ಷತೆಗೆ ಒಂದು ಉತ್ತಮ ಸಂದೇಶವನ್ನು ನೀಡಿದೆ.
ಇದನ್ನೂ ಓದಿರಿ: ಕೊರೋನಾ ವೈರಸ್ ಭೀತಿ: ವದಂತಿಗಳಿಗೆ ಕಿವಿಗೊಡದಿರಿ ಜನತೆಗೆ ಪ್ರಧಾನಿ ಮೋದಿ ಮನವಿ
ಇದನ್ನೂ ಓದಿರಿ: ಈ ಲಾಕ್ ಡೌನ್ ಸಮಯದಲ್ಲಿ ನಾದಬ್ರಹ್ಮ ಹಂಸಲೇಖ ರಸ್ತೆಗಿಳಿದು ಏನುಮಾಡಿದ್ದಾರೆ ಗೊತ್ತೇ ?
ಈ ವಿಡಿಯೋದಲ್ಲಿ ಚುಡಾಯಿಸುವ ಪುಂಡರಿಗೆ ಸಮಾಜದ ಒಗ್ಗಟ್ಟನ್ನು ತೋರಿಸುವ ಮೂಲಕ, ಮಹಿಳೆಗೆ ಧೈರ್ಯ ನೀಡಿದ್ದಾರೆ. ಪ್ರತಿಯೊಬ್ಬರೂ ಅವಳ ಬೆನ್ನಿಗೆ ನಿಂತು ಪುಂಡರನ್ನು ಹಿಮ್ಮೆಟ್ಟಿಸುವ ಸಂದೇಶವನ್ನು ಇಂದು ನೀಡಿರುವುದು ವಿಶೇಷವಾಗಿದೆ. ಅಲ್ಲದೇ ನೀವು ಬರ್ತೀರಾ? ನಿರ್ಭಯವಾದ ಸಮಾಜ ಕಟ್ಟೋಣ ಎಂದು ಪುನೀತ್ ಕೇಳಿದ್ದಾರೆ.
ಕೆಲವೊಮ್ಮೆ, ಸಮಾಜವನ್ನು ಉತ್ತಮಗೊಳಿಸಲು ಬೇಕಾಗಿರುವುದು ಒಗ್ಗಟ್ಟು..!! ಈ ಮಹಿಳಾ ದಿನದಂದು ನಮ್ಮಲ್ಲಿರುವ ಏಕತೆಯನ್ನು ಕಂಡು ಕೊಳ್ಳೋಣ ಹಾಗೂ ಮಹಿಳೆಯರಿಗಾಗಿ ಎಲ್ಲೆಡೆ ಒಟ್ಟಾಗಿ ನಿಲ್ಲೋಣ
Sometimes, all it takes to make society better, is standing up together! Happy #womansday on this 8th of March!!! pic.twitter.com/qrEadRVzyB
— BMTC (@BMTC_BENGALURU) March 7, 2020